ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹಾರ್ ಕಾರಣ: ಬಾಂಬ್ ಸಿಡಿಸಿದ ಕಂಗನಾ

Public TV
1 Min Read

ಬಾಲಿವುಡ್ (Bollywood) ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ವಿದೇಶದಲ್ಲಿ ನೆಲೆಸಲು ಹಾಗೂ ಬಾಲಿವುಡ್ ನಿಂದ ದೂರವಾಗಲು ಕಾರಣ ಕರಣ್ ಜೋಹಾರ್ ಎಂದು ಹೇಳುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ನಟಿ ಕಂಗನಾ ರಣಾವತ್ (Kangana Ranaut). ನೇರವಾಗಿ ಕಂಗನಾ ಸೋಷಿಯಲ್ ಮೀಡಿಯಾದಲ್ಲೇ ಈ ಕುರಿತು ಬರೆದುಕೊಂಡಿದ್ದಾರೆ. ಕರಣ್ ಜೋಹಾರ್ (Karan Johar) ಮೇಲೆ ಮಾಡಿರುವ ಗಂಭೀರ ಆರೋಪ ಬಾಲಿವುಡ್ ನಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ, ‘ನಾನು ಬಾಲಿವುಡ್ ನಿಂದ ದೂರವಾಗಲು ಮತ್ತು ಅಲ್ಲಿನ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣ ರಾಜಕೀಯ. ಎಲ್ಲೋ ಒಂದು ಕಡೆ ನನ್ನನ್ನು ತುಳಿಯುವುದಕ್ಕೆ ಶುರು ಮಾಡಿದ್ದಾರೆ ಅನಿಸಿತು. ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ ಎನ್ನುವ ವಿಚಾರ ಗೊತ್ತಾಯಿತು. ಹೀಗಾಗಿ ನಾನು ಹಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

ಪ್ರಿಯಾಂಕಾ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆಯೇ ಈ ಅಖಾಡಕ್ಕೆ ಕಂಗನಾ ಇಳಿದಿದ್ದು, ನೇರವಾಗಿ ಕರಣ್ ಜೋಹಾರ್ ಬಗ್ಗೆಯೇ ಆರೋಪ ಮಾಡಿದ್ದಾರೆ. ‘ಕರಣ್ ಜೋಹಾರ್ ನಿಮ್ಮನ್ನು ಬ್ಯಾನ್ ಮಾಡಿದ್ದರು. ಹಲವರು ಗುಂಪು ಕಟ್ಟಿಕೊಂಡು ಓಡಿಸಿದರು. ಈ ಕಾರಣಕ್ಕಾಗಿಯೇ ಪ್ರಿಯಾಂಕಾ ಬಾಲಿವುಡ್ ಬಿಟ್ಟರು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಕಂಗನಾ ರಣಾವತ್.

ನೇರ ಮಾತುಗಳಿಂದಾಗಿಯೇ ಕಂಗನಾ ಸುಖಾಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅದರಲ್ಲೂ ಕರಣ್ ಜೋಹಾರ್ ವಿಷಯದಲ್ಲಿ ಸದಾ ಆರೋಪ ಮಾಡುತ್ತಲೇ ಇದ್ದಾರೆ. ಈ ಬಾರಿಯೂ ಕರಣ್ ಮೇಲೆಯೇ ಆರೋಪ ಮಾಡಿರುವ ಕಂಗನಾ, ಒಂದು ಕಾಲದ ವಿರೋಧಿಯಾಗಿದ್ದ ಪ್ರಿಯಾಂಕಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

Share This Article