ಟ್ರೋಲ್ ಮಾಡಿದ್ದವನ ಬೆವರಿಳಿಸಿದ ಕರಣ್ ಜೋಹರ್-ಟ್ವೀಟ್ ಡಿಲೀಟ್

Public TV
1 Min Read

ಮುಂಬೈ: ಬಾಲಿವುಡ್ ನ ಪ್ರಸಿದ್ಧ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ತಮ್ಮನ್ನು ಟ್ರೋಲ್ ಮಾಡಿದ ಯುವಕನ ಬೆವರು ಇಳಿಸಿದ್ದಾರೆ. ಕರಣ್ ಜೋಹರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ಯುವಕ ತನ್ನ ಟ್ವೀಟ್ ಡಿಲೀಟ್ ಮಾಡಿಕೊಂಡಿದ್ದಾನೆ.

ಕರಣ್ ಜೋಹರ್ ಅವರ ಖಾಸಗಿ ಜೀವನದ ವಿಷಯ ಬಹುದಿನಗಳಿಂದಲೂ ಚರ್ಚೆಯಲ್ಲಿದೆ. ಆದ್ರೆ ಇದೂವರೆಗೂ ಕರಣ್ ಜೋಹರ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಸಂಬಂಧ ಅಂತೆ-ಕಂತೆಗಳು ಬಾಲಿವುಡ್ ನಲ್ಲಿ ಮೊದಲಿನಿಂದಲೂ ಹರಿದಾಡುತ್ತಿವೆ. ಮದುವೆ ಆಗದಿದ್ದರೂ ಸರಗೋಸಿ ಮೂಲಕ ಎರಡು ಮಕ್ಕಳನ್ನು ಕರಣ್ ಜೋಹರ್ ಪಡೆದುಕೊಂಡಿದ್ದಾರೆ. ಇದೀಗ ಕರಣ್ ಜೋಹರ್ ಅವರ ವೈಯಕ್ತಿಕ ಜೀವನ ಕುರಿತು ಟೀಕಿಸಿದ್ದ ಯುವಕನ ಟ್ವೀಟ್ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಏನದು ಟ್ವೀಟ್?
ಕರಣ್ ಜೋಹರ್ ಅವರ ಜೀವನಾಧರಿಸಿದ ಸಿನಿಮಾ ಮಾಡಬೇಕು. ಚಿತ್ರಕ್ಕೆ ‘ಕರಣ್ ಜೋಹರ್: ದಿ ಗೇ’ ಎಂದು ಹೆಸರಿಡಬೇಕೆಂದು ಬರೆದು ಟ್ವೀಟ್ ಮಾಡಿದ್ದನು. ಸದಾ ನಗುತ್ತಲೇ ಮಾತನಾಡುವ ಕರಣ್ ಜೋಹರ್ ತಮ್ಮದೇ ಶೈಲಿಯಲ್ಲಿ ನೆಟ್ಟಿಗನ ಚಳಿ ಬಿಡಿಸಿದ್ದಾರೆ. ನೀವು ವಾಸ್ತವದ ಜೀವನದಲ್ಲಿ ಒರಿಜಿನಲ್ ಜೀನಿಯಸ್ ಆಗಿದ್ದೀರಿ. ಇಷ್ಟು ದಿನ ಎಲ್ಲಿ ಅಡಗಿಕೊಂಡಿದ್ದೀರಿ? ಇಂದು ಟ್ವಿಟ್ಟರ್ ನಲ್ಲಿ ಅತ್ಯಂತ ಅನುಕೂಲಕರವಾದ ವಿಷಯವನ್ನು ಚರ್ಚೆಗೆ ತಂದಿರೋದಕ್ಕೆ ನಿಮಗೆ ಧನ್ಯವಾದಗಳೆಂದು ಮೃದು ಮಾತಿನಲ್ಲಿ ಚಾಟಿ ಬೀಸಿದ್ದಾರೆ.

ಕರಣ್ ಜೋಹರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ಯುವಕ ಟ್ವೀಟ್ ಡಿಲೀಟ್ ಮಾಡಿದ್ದಾನೆ. ಈ ಸಂಬಂಧ ಹಲವರು ಯುವಕನ ಟ್ವೀಟ್‍ಗೆ ಕಿಡಿಕಾರಿದ್ದು, ಬೇರೋಬ್ಬರ ಖಾಸಗಿ ಜೀವನದ ಬಗ್ಗೆ ಪ್ರಶ್ನೆ ಮಾಡೋದು ತಪ್ಪು. ಈ ರೀತಿಯ ಟ್ವೀಟ್ ಗಳಿಗೆ ಕರಣ್ ಜೋಹರ್ ಪ್ರತಿಕ್ರಿಯಿಸಬಾರದು. ಮತ್ತೆ ಹಲವರು ನಿಮ್ಮ ಉತ್ತರ ಟ್ರೋಲ್ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *