‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

Public TV
1 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty), ಸಪ್ತಮಿ ಗೌಡ ನಟನೆಯ ‘ಕಾಂತಾರ’ ಸಿನಿಮಾ ಸಕ್ಸಸ್ ನಂತರ ಅವರಿಗೆ ಬೇಡಿಕೆ ಜಾಸ್ತಿಯಾಗಿದೆ. ‘ಕಾಂತಾರ’ 2ಗೆ (Kantara 2) ಭರ್ಜರಿಯಾಗಿ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ರಿಷಬ್ ಶೆಟ್ಟಿ ಎಂದಿನಂತೆ ತಮ್ಮ ಕೆಲಸ ಮುಂದುವರೆಸಿದ್ದಾರೆ. ಯಾವುದೇ ರೀತಿಯ ಬೇರೆ ವಿಷಯಗಳನ್ನ ತಲೆಗೆ ಹಚ್ಚಿಕೊಳ್ಳದೇ ಧ್ಯಾನಸ್ಥ ಸ್ಥಿತಿಯಲ್ಲಿ ಕಾಂತಾರ 2 ಸಿದ್ಧತೆಗೊಳಿಸುತ್ತಿದ್ದಾರೆ. ಇದನ್ನೂ ಓದಿ:ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ನಿರ್ದೇಶನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬೆಲ್‌ಬಾಟಂ ಸೇರಿದಂತೆ ಹಲವು ಸಿನಿಮಾಗಳು ರಿಷಬ್‌ಗೆ ಸಕ್ಸಸ್ ನೀಡಿದೆ. ಆದರೆ ‘ಕಾಂತಾರ’ ಮಾಡಿದ ಹಾವಳಿ ಮಾತ್ರ ಅಷ್ಟಿಷ್ಟಲ್ಲ. ದೈವದ ಕಥೆಯನ್ನ ಅದ್ಭುತವಾಗಿ ‘ಕಾಂತಾರ’ ಸಿನಿಮಾದ ಮೂಲಕ ತೋರಿಸಿ ಕೊಟ್ಟಿದ್ದರು. ಪಂಜುರ್ಲಿ ಕಥೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ರಿಷಬ್ ಶೆಟ್ಟಿ- ಸಪ್ತಮಿ ಗೌಡ ನಟನೆಗೆ ಫ್ಯಾನ್ಸ್ ಭೇಷ್ ಎಂದಿದ್ದರು.

‘ಕಾಂತಾರ’ ಸಿನಿಮಾ ಮೈಲುಗಲ್ಲು ಸೃಷ್ಟಿಸಿದ ಹಾಗೇ ಕಾಂತಾರ 2 ಕೂಡ ಹಿಸ್ಟರಿ ಕ್ರಿಯೇಟ್ ಮಾಡಲೇಬೇಕು ಅಂತಾ ರಿಷಬ್ ಪಣ ತೊಟ್ಟಿದ್ದಾರೆ. ಹಾಗಾಗಿ ರಿಷಬ್ ಕಾಂತಾರ 2ಗೆ ಕುದುರೆ ಸವಾರಿ ಕೌಶಲ್ಯ ಮತ್ತು ಜನಪ್ರಿಯ ಕಲೆ ಕಳರಿ ಪಯಟ್ಟುಗಳನ್ನು ಕಲಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಆಗಸ್ಟ್ 27ಕ್ಕೆ ಲಾಂಚ್ ಆಗಲಿದೆ. ಈ ಪ್ರೀಕ್ವೆಲ್‌ನಲ್ಲಿ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಸಾಥ್ ನೀಡುತ್ತಿದ್ದಾರೆ. ‘ಕಾಂತಾರ’ ಹಿನ್ನಲೆ ಹೇಗಿರಲಿದೆ ಈಗಾಗಲೇ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ರಿಷಬ್ ಶೆಟ್ಟಿ ನಯಾ ಅವತಾರ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article