ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

Public TV
2 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ರನ್‌ಗಳ ರೋಚಕ ಜಯ ಸಾಧಿಸಿತು.

ಕೊನೆ ಕ್ಷಣದಲ್ಲಿ ಪಿಂಕ್‌ Vs ಗ್ರೀನ್‌ ಆರ್ಮಿ ನಡುವಿನ ಕದನ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದ ತುಂಬಾ ನೆರೆದಿದ್ದ ಅಭಿಮಾನಿಗಳು ಕೊನೆಯವರೆಗೂ ʻಆರ್‌ಸಿಬಿ, ಆರ್‌ಸಿಬಿ, ಕೊಹ್ಲಿ, ಕೊಹ್ಲಿʼ ಎಂದು ಕೂಗುತ್ತಾ ಆಟಗಾರರನ್ನ ಹುರಿದುಂಬಿಸಿದರು. ಇದನ್ನೂ ಓದಿ: BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

ಇದೇ ವೇಳೆ ಆರ್‌ಸಿಬಿ ಅಭಿಮಾನಿಗಳನ್ನ ರಂಜಿಸಲು ಕನ್ನಡ ಗೀತೆಗಳನ್ನ (Kannada Song) ಪ್ರಸಾರ ಮಾಡಲಾಗಿತ್ತು. ಮೊದಲಿಗೆ ನಟ ಶಿವರಾಜ್‌ ಕುಮಾರ್‌ ಅಭಿನಯದ ಟಗರು (Tagaru) ಚಿತ್ರದ ʻಟಗರು ಬಂತು ಟಗರುʼ ಗೀತೆ ಪ್ರಸಾರ ಮಾಡಲಾಗಿತ್ತು. ಕೆಲ ಹೊತ್ತು ಕಳೆದ ಬಳಿಕ ಕಾಂತಾರ ಚಿತ್ರದ ʻವರಾಹ ರೂಪಂʼ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡಲಾಯಿತು. ಕಾಂತಾರ ಚಿತ್ರದ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡುತ್ತಿದ್ದಂತೆ ಕ್ರೀಸ್‌ನಲ್ಲಿದ್ದ ರಾಜಸ್ಥಾನ್‌ ತಂಡದ ಆಟಗಾರ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕೈಚೆಲ್ಲಿದರು. ಇದು ಆರ್‌ಸಿಬಿಗೆ ಬೆನಿಫಿಟ್‌ ಆಯಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಹುಟ್ಟಿಕೊಂಡಿದ್ದು, ಆರ್‌ಸಿಬಿ ಗೆಲುವಿಗೆ ದೈವವೇ ಕಾರಣ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

ಕೊಹ್ಲಿ ಸಂಜುಗೆ ಸ್ಪೆಷಲ್‌ ಗಿಫ್ಟ್‌: ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಗ್ರೀನ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದ ವಿರಾಟ್‌ ಕೊಹ್ಲಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಗಿಡಗಳನ್ನು ನೀಡಿ ಸ್ವಾಗತಿಸಲಾಯಿತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

Share This Article