ತುಳು ಭಾಷೆಯಲ್ಲೂ ಬರಲಿದೆ ‘ಕಾಂತಾರ’: ಶೆಟ್ರೇ ಉಡಲ್ ಗೆಂದಿಯರ್

Public TV
1 Min Read

ನ್ನಡದಲ್ಲಿ ಸೂಪರ್ ಹಿಟ್ ಆಗಿ, ಸದ್ಯ ಹಿಂದಿಯಲ್ಲಿ (Hindi) ಬಿಡುಗಡೆ ಆಗಿರುವ, ನಾಳೆ ತಮಿಳು ಮತ್ತು ತೆಲುಗಿನಲ್ಲೂ ಅಬ್ಬರಿಸಲಿರುವ ಕಾಂತಾರ (Kantara) ಸಿನಿಮಾ ತುಳು ಭಾಷೆಗೂ ಡಬ್ ಆಗಲಿದೆ. ಇಂಥದ್ದೊಂದು ಖುಷಿ ಸಂಗತಿಯನ್ನು ಕೊಡಲು ಚಿತ್ರತಂಡ ನಿರ್ಧರಿಸಿದೆ. ಕರಾವಳಿಯ ಭಾಷೆ, ಆಚಾರ ವಿಚಾರ, ಅಲ್ಲಿನ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಅಲ್ಲದೇ ಕೆಲ ಕಡೆ ತುಳು (Tulu) ಭಾಷೆಯನ್ನೂ ಬಳಸಲಾಗಿದೆ. ಹೀಗಾಗಿ ಕಾಂತಾರ ಮುಂದಿನ ದಿನಗಳಲ್ಲಿ ತುಳು ಭಾಷೆಯಲ್ಲೇ ನೋಡಬಹುದಾಗಿದೆ.

ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಇಂದು ಹಿಂದಿಯಲ್ಲಿ, ನಾಳೆ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ (Rishabh Shetty) ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.

ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *