ರಶ್ಮಿಕಾ, ಶ್ರೀಲೀಲಾ ನಡುವೆ ‘ಕಾಂತಾರ’ ಚೆಲುವೆ ಎಂಟ್ರಿ- ತೆಲುಗಿನತ್ತ ಸಪ್ತಮಿ

Public TV
1 Min Read

ನ್ನಡದ ಕಾಂತಾರ ಚೆಲುವೆ ಸಪ್ತಮಿ ಗೌಡ (Saptami Gowda) ಇದೀಗ ಟಾಲಿವುಡ್ (Tollywood) ರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ(Sreeleela) ಪೈಪೋಟಿ ನಡುವೆ ಕಾಂತಾರ (Kantara) ನಟಿ ಎಂಟ್ರಿ ಕೊಟ್ಟಿದ್ದು, ಇಬ್ಬರಿಗೂ ಠಕ್ಕರ್ ಕೊಡಲು ಕನ್ನಡದ ಮತ್ತೋರ್ವ ನಟಿಮಣಿ ಸಜ್ಜಾಗಿದ್ದಾರೆ.

‘ಕಾಂತಾರ’ ಸಿನಿಮಾದ ಸಕ್ಸಸ್ ನಂತರ ಪ್ಯಾನ್‌ ಇಂಡಿಯಾ ನಾಯಕಿಯಾಗಿ ಮಿಂಚ್ತಿರುವ ಬೆಂಗಳೂರಿನ ಬೆಡಗಿ ಸಪ್ತಮಿ, ಈಗ ತೆಲುಗು ಸಿನಿಮಾಗೆ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಭೀಷ್ಮ ಹೀರೋ ನಿತಿನ್ ನಟನೆಯ ‘ತಮ್ಮುಡು’ ಸಿನಿಮಾಗೆ ಸಪ್ತಮಿ ಗೌಡ ಹೀರೋಯಿನ್ ಆಗಿದ್ದಾರೆ. ಈ ಮೂಲಕ ತೆಲುಗು ಅಂಗಳಕ್ಕೆ ಮತ್ತೋರ್ವ ನಟಿ ಲಗ್ಗೆ ಇಡ್ತಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ

ಹೌದು.. ನಿತಿನ್ (Nithin) ನಾಯಕಿಯಾಗಿ ಸಪ್ತಮಿ ಗೌಡ (Saptami Gowda) ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ ತಮ್ಮುಡು ಸಿನಿಮಾ ಮೂಡಿ ಬರುತ್ತಿದ್ದು, ದಿಲ್ ರಾಜು (Dilraju) ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ಹಿಂದೆ ತಮ್ಮುಡು ಚಿತ್ರದ ಟೈಟಲ್‌ನಲ್ಲಿ ಪವನ್ ಕಲ್ಯಾಣ್ ನಟಿಸಿ ಗಮನ ಸೆಳೆದಿದ್ದರು. ಈಗ ಅದೇ ಟೈಟಲ್‌ನಲ್ಲಿ ಭಿನ್ನವಾಗಿರೋ ಕಥೆ ಮಾಡಲು ಚಿತ್ರತಂಡ ಹೊರಟಿದೆ.

ಈ ಹಿಂದೆ ನಿತಿನ್ ಚಿತ್ರದಿಂದ ರಶ್ಮಿಕಾ ಹೊರ ಬಂದಿದ್ದರು. ಬಳಿಕ ಆ ಸಿನಿಮಾ ಶ್ರೀಲೀಲಾ ಪಾಲಾಗಿತ್ತು. ಈಗ ನಿತಿನ್ ಮುಂದಿನ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಕಾಂತಾರ ಸಿನಿಮಾ ಕೂಡ ತೆಲುಗಿನಲ್ಲಿ ಡಬ್ ಆಗಿ ಸಕ್ಸಸ್ ಕಂಡಿತ್ತು. ಈಗಾಗಲೇ ತೆಲುಗು ಸಿನಿರಸಿಕರಿಗೆ ನಟಿ ಪರಿಚಿತರಾಗಿದ್ದಾರೆ. ಹಾಗಾಗಿ ರಶ್ಮಿಕಾ, ಶ್ರೀಲೀಲಾ, ನಭಾ, ನೇಹಾ ಶೆಟ್ಟಿ(Neha Shetty) ಮೀರಿ ಸಪ್ತಮಿ ಬೆಳೆಯುವ ಸೂಚನೆ ಸಿಕ್ತಿದೆ ಅಂತಿದ್ದಾರೆ ಸಿನಿಪಂಡಿತರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್