ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ

Public TV
1 Min Read

`ಕಾಂತಾರ ಚಾಪ್ಟರ್ 1′ (Kantara: Chapter 1) ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಕುಲಶೇಖರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುಲ್ಶನ್ ದೇವಯ್ಯ (Gulshan Devaiah) ತಮ್ಮ ಸಹ ನಟ ರಾಕೇಶ್ ಪೂಜಾರಿಯನ್ನು (Rakesh Poojary) ನೆನೆದು ಭಾವುಕರಾಗಿದ್ದಾರೆ.

ಈ ಕುರಿತು ನಟ ಗುಲ್ಶನ್ ದೇವಯ್ಯ ಅವರು ತಮ್ಮ ಎಕ್ಸ್‌ (X) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನನಗೆ ರಾಕೇಶ್ ಪೂಜಾರಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜನರು ಆತನ ಮೇಲಿಟ್ಟಿರುವ ಪ್ರೀತಿಯನ್ನು ಹಾಗೂ ಆತನನ್ನು ನೆನಪಿಸಿಕೊಳ್ಳುವ ಪರಿಯನ್ನು ನಾನು ಗಮನಿಸುತ್ತಿದ್ದೇನೆ. ಇದರಿಂದಲೇ ಆತ ಎಂತಹ ಕಲಾವಿದ ಎಂದು ಗೊತ್ತಾಗುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಅದ್ಭುತ ಭಾರತೀಯ ಚಿತ್ರ, ಅಭಿನಯವು ಪೀಳಿಗೆಗೆ ಸ್ಫೂರ್ತಿ: ರಿಷಬ್‌ ನಟನೆಗೆ ರಿತೇಶ್ ದೇಶಮುಖ್ ಚಪ್ಪಾಳೆ

ಇದೇ ವೇಳೆ ಪೋಸ್ಟ್‌ವೊಂದನ್ನು ರೀಪೋಸ್ಟ್ ಮಾಡಿದ್ದು, ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪ್ರೇಕ್ಷಕರನ್ನು ಅತೀ ಹೆಚ್ಚು ನಗಿಸಿದ ಪಾತ್ರವೆಂದರೆ ಅದು ರಾಕೇಶ್ ಪೂಜಾರಿಯವರದ್ದು. ಆದರೆ ಇಂದು ಸಿನಿಮಾದ ಮೂಲಕ ಅವರಿಗೆ ಸಿಗುತ್ತಿರುವ ಪ್ರೀತಿಯನ್ನು ನೋಡಲು ಅವರು ನಮ್ಮೊಂದಿಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕಾಂತಾರ ಚಾಪ್ಟರ್ 1′ ಅ.2ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.ಇದನ್ನೂ ಓದಿ: ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

 

Share This Article