ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ

Public TV
1 Min Read

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 (Kantara: Chapter 1) ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ (Rukmini Vasanth) ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ (Varamahalakshmi) ಹಬ್ಬದ ಈ ಶುಭದಿನದಂದು, ಚಿತ್ರತಂಡವು ಅವರ ಮೊದಲ ನೋಟವನ್ನು ಅನಾವರಣಗೊಳಿಸಿದೆ.

ನಾಯಕ ನಟ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್ ಮತ್ತು ನಂತರ ಬಂದ ಶೂಟಿಂಗ್ ಮುಕ್ತಾಯದ ವೀಡಿಯೋಗಳು ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ. ಇದೀಗ ‘ಕನಕವತಿ’ಯ ಪಾತ್ರದ ಪರಿಚಯ, ಚಿತ್ರದ ಕುರಿತಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.


ಚಿತ್ರದಲ್ಲಿನ ಅದ್ಭುತ ದೃಶ್ಯ ವೈಭವಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಜೀವ ತುಂಬಲಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್, ಸದಾ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮತ್ತು ಭಾವನಾತ್ಮಕ ಕಥೆಗಳನ್ನು ಹೇಳುವ ತನ್ನ ಬದ್ಧತೆಯನ್ನು ಈ ಚಿತ್ರದ ಮೂಲಕ ಮತ್ತೊಮ್ಮೆ ಪ್ರದರ್ಶಿಸಿದೆ.

ವರಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ, ಹೊಂಬಾಳೆ ಫಿಲ್ಮ್ಸ್ ಕನಕವತಿಯ ಈ ಮೊದಲ ನೋಟವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿದೆ.  ‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 2, 2025 ರಂದು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Share This Article