ನೀಲಿ ಬಣ್ಣದ ಡ್ರೆಸ್ ತೊಟ್ಟು ಮಿಂಚಿದ ಸಿಂಗಾರ ಸಿರಿ ಸಪ್ತಮಿ

By
1 Min Read

‘ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ, ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಲಕ ಲಕ ಅಂತಾ ಮಿಂಚ್ತಿರೋ ಸಪ್ತಮಿ ಇದೀಗ ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ್ದಾರೆ.

ಡಾಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಸಪ್ತಮಿ ಗೌಡ (Saptami Gowda) ಬಳಿಕ ‘ಕಾಂತಾರ’ ಚಿತ್ರದ ಬಳಿಕ ನಟಿಯ ಲಕ್ ಬದಲಾಯ್ತು. ಸೌಂದರ್ಯದ ಜೊತೆ ಪ್ರತಿಭೆ ಇರುವ ನಟಿ ಸಪ್ತಮಿಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ರಿಷಬ್ ಶೆಟ್ಟಿಗೆ (Rishab Shetty)  ನಾಯಕಿಯಾಗಿ ಗೆದ್ದ ಮೇಲೆ ಬಾಲಿವುಡ್ (Bollywood) ಜೊತೆ ಬೇರೆ ಬೇರೆ ಭಾಷೆಗಳಿಂದ ಸಿನಿಮಾ ಆಫರ್ ಅರಸಿ ಬರುತ್ತಿದೆ.

ಇತ್ತೀಚಿನ ಸಿನಿಮಾ ಸಮಾರಂಭದಲ್ಲಿ ನಟಿ ಸಪ್ತಮಿ, ನೀಲಿ ಬಣ್ಣದ ಡ್ರೆಸ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಿಂಗಾರ ಸಿರಿಯ ನಯಾ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಫ್ಯಾಮಿಲಿಗಾಗಿ ನಟಿ ಅನುಷ್ಕಾ ಶರ್ಮಾ ಗಟ್ಟಿ ನಿರ್ಧಾರ

ಸಪ್ತಮಿ ಗೌಡ ಕೈಯಲ್ಲಿ, ಕನ್ನಡದ ಕಾಳಿ, ಯುವ, ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿದೆ.

Share This Article