ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

Public TV
1 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಇಂದು (ಜುಲೈ 7)ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾಂತಾರ ಸಕ್ಸಸ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ 40ನೇ ವರ್ಷದ ಹುಟ್ಟುಹಬ್ಬ (Birthday) ಸೆಲೆಬ್ರೇಟ್ ಮಾಡ್ತಿದ್ದಾರೆ. ಹುಟ್ಟುಹಬ್ಬದ ಈ ಸ್ಪೆಷಲ್ ದಿನದಂದು ರಿಷಬ್ ಸಿನಿಮಾದ ಅಪ್‌ಡೇಟ್ ಸಿಗುತ್ತಾ.?

ಪ್ರತಿಭಾನ್ವಿತ ನಟ ರಿಷಬ್ ಶೆಟ್ಟಿ ಅವರು ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಾ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. ನಟನೆಯ ಜೊತೆ ಡೈರೆಕ್ಷನ್ ಕೂಡ ಆಸಕ್ತಿಯಿದ್ದ ಕಾರಣ, 2016ರಲ್ಲಿ ಅವರು ‘ರಿಕ್ಕಿ’ ಸಿನಿಮಾ ನಿರ್ದೇಶನ ಮಾಡಿದರು. ಅದೇ ವರ್ಷ ರಿಲೀಸ್ ಆದ ರಿಷಬ್ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು. ಇದನ್ನೂ ಓದಿ:ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

ಕಾಂತಾರ 2 RISHAB SHETTY

2018ರಲ್ಲಿ ರಿಲೀಸ್ ಆದ ‘ಸಹಿಪ್ರಾ ಶಾಲೆ ಕಾಸರಗೋಡು’ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿತು. ಮಕ್ಕಳನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ್ದ ಈ ಸಿನಿಮಾ ಕನ್ನಡ ಶಾಲೆಗಳ ಉಳಿಸುವ ಅಗತ್ಯತೆಯ ಸಂದೇಶವನ್ನೂ ಈ ಸಿನಿಮಾದ ಮೂಲಕ ರಿಷಬ್ ತೆರೆಯ ಮೇಲೆ ತೋರಿಸಿದರು. ಕಳೆದ ವರ್ಷ ರಿಲೀಸ್ ಆದ ‘ಕಾಂತಾರ’ ಚಿತ್ರ ಅವರ ರಿಷಬ್ ಕೆರಿಯರ್‌ಗೆ ಬಿಗ್ ಬ್ರೇಕ್ ಕೂಡ ಸಿಕ್ಕಿತ್ತು.

‘ಕಾಂತಾರ 2’ಗಾಗಿ (Kantara 2) ರಿಷಬ್ ಶೆಟ್ಟಿ ಭರ್ಜರಿ ತಯಾರಿ ಮಾಡ್ತಿದ್ದಾರೆ. ಅದಕ್ಕಾಗಿ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಯುತ್ತಿದ್ದಾರೆ. ಕಾಂತಾರ ಚಿತ್ರದಂತೆ ಕಾಂತಾರ 2 ಕೂಡ ಅಭೂತಪೂರ್ವ ಯಶಸ್ಸು ಗಳಿಸಲೇಬೇಕು ಅಂತಾ ಶೆಟ್ರು ಪಣ ತೊಟ್ಟಿದ್ದಾರೆ. ಇದೆಲ್ಲದರ ನಡುವೆ ಜುಲೈ 7ರಂದು ರಿಷಬ್ ಹುಟ್ಟುಹಬ್ಬ ಆಗಿರುವ ಕಾರಣ, ನಟನ ಮುಂದಿನ ಸಿನಿಮಾಗಳ ಬಗ್ಗೆ ಸಿಹಿಸುದ್ದಿ ಸಿಗುತ್ತಾ ಕಾದುನೋಡಬೇಕಿದೆ.

ರಿಷಬ್ ಶೆಟ್ಟಿ ಅವರು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅವರು ಫ್ಯಾನ್ಸ್‌ಗೆ ಭೇಟಿ ಆಗುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಭಿಮಾನಿಗಳಿಗೆ ಬರುವಂತೆ ಈಗಾಗಲೇ ರಿಷಬ್ ಅವರು ಆಹ್ವಾನ ನೀಡಿದ್ದಾರೆ.

Share This Article