ಫ್ಯಾನ್ಸ್‌ಗೆ ಗುಡ್ ನ್ಯೂಸ್- ಮತ್ತೆ ಕಿರುತೆರೆಗೆ ಕಿರಣ್ ರಾಜ್

Public TV
1 Min Read

ಕಿನ್ನರಿ, ಕನ್ನಡತಿ (Kannadathi) ಸೀರಿಯಲ್‌ಗಳ ಮೂಲಕ ಗಮನ ಸೆಳೆದಿದ್ದ ಕಿರಣ್ ರಾಜ್ (Kiran Raj) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಕರ್ಣ’ನಾಗಿ ಮತ್ತೆ ಕಿರುತೆರೆಯಲ್ಲಿ ರಂಜಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

ಕಿರಣ್ ರಾಜ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಕಿರುತೆರೆಯಲ್ಲಿ ಅವರಿಗೆ ಹೆಚ್ಚಿನ ಜನಪ್ರಿಯತೆ ಇದೆ. ‘ಕನ್ನಡತಿ’ ಸೀರಿಯಲ್ ಮುಗಿದ್ಮೇಲೆ ಟಿವಿ ಪರದೆಯಿಂದ ದೂರ ಸರಿದಿದ್ದರು. ಈಗ ಮತ್ತೆ ಕರ್ಣನ ಕಥೆ ಹೇಳೋಕೆ ಹೊರಟಿದ್ದಾರೆ. ಈ ಕುರಿತ ಪ್ರೋಮೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಕರ್ಣ ಕಥೆಯ ಹೀರೋ ಕಿರಣ್ ರಾಜ್ ಹೆಸರು. ಸೀರಿಯಲ್‌ನಲ್ಲಿ ದೊಡ್ಡ ಸ್ತ್ರೀರೋಗ ತಜ್ಞನಾಗಿ ಕಾಣಿಸಿಕೊಂಡಿದ್ದಾರೆ. ಕರ್ಣ ದೊಡ್ಡ ವೈದ್ಯನಾಗಿ ಗುರುತಿಸಿಕೊಂಡಿದ್ದರೂ ಕೂಡ ಆತ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರನಾಗಿ ಕಾಣಿಸಿಕೊಂಡಿದ್ದಾರೆ. ತನ್ನವರ ಮಧ್ಯೆಯೇ ಅನಾಥವಾಗಿರೋ ಮನೆ ಮಗನ ಕಥೆಯಾಗಿದೆ.

ಅಂದಹಾಗೆ, ಶೇರ್, ರಾನಿ, ಬಡ್ಡೀಸ್, ಬಹದ್ದೂರ್ ಗಂಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಸಿನಿಮಾಗಿಂತ ಸೀರಿಯಲ್‌ನಲ್ಲಿ ಅವರಿಗೆ ಉತ್ತಮ ಬ್ರೇಕ್ ಸಿಕ್ಕಿದೆ.

Share This Article