ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

Public TV
1 Min Read

ತುಳು ಸಿನಿಮಾದ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಚೇತನ್ ಮುಂಡಾಡಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನೈಜಘಟನೆಯನ್ನು ಆಧರಿಸಿದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದು ಆಟಿಸಂ ಸಮಸ್ಯೆಯ ಕುರಿತಾದ ಚಿತ್ರ ಎನ್ನುವುದು ವಿಶೇಷ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

ಚಿತ್ರಕ್ಕೆ ವರ್ಣಪಟಲ ಎಂದು ಹೆಸರಿಟ್ಟಿದ್ದು, ಈಗಾಗಲೇ ಈ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್‌  ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪುರಸ್ಕಾರಗಳನ್ನು ಪಡೆದಿದೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

‘ಎಲ್ಲರ ಅಮ್ಮಂದಿರ ತರಹ ನಾನು ಅಮ್ಮ ಅಲ್ಲ. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ..’ ಎಂಬ ಭಾವನಾತ್ಮಕ ಲೈನ್ ಗಳ ಮೂಲಕ ಈಗಾಗಲೇ ಚಿತ್ರದ ಟ್ರೇಲರ್ ಗಮನ ಸೆಳೆದದ್ದು, ತಮ್ಮ ಸಿನಿಮಾದ ಬಗ್ಗೆ ನಿರ್ದೇಶಕರು ಹೇಳಿದ್ದು ಹೀಗೆ, “ನಿತ್ಯಾ ತಾನು ಪ್ರೀತಿಸಿದ ಹುಡುಗ ಮೈಕಲ್ ನನ್ನು ಮದುವೆಯಗ್ತಾಳೆ . ಮದುವೆಯ ಬಳಿಕ ಹೆಣ್ಣು ಮಗುವಿಗೆ ನಿತ್ಯ ತಾಯಿ ಆಗ್ತಾಳೆ.  ಆ ಮಗುವೇ ಮೈನಾ. ಆದ್ರೆ ಎಲ್ಲಾ ಸರಿಯಿದ್ದ ನಿತ್ಯಾಳ ಬದುಕಲ್ಲಿ ಮೈನಾ ಅನ್ನೋ ಮಗಳಿಂದ ಜೀವನವೇ ಬದಲಾಗಿ ಹೋಗುತ್ತೆ. ಮೈನಾ ಆಟಿಸಂ ಅನ್ನೋ ಖಾಯಿಲೆಯಿಂದ ಬಳಲುತ್ತಿರುತ್ತಾಳೆ. ಇದರಿಂದ ನಿತ್ಯಾ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಆ ಖಾಯಿಲೆಯಿಂದ ಮೈನಾಳನ್ನು ನಿತ್ಯಾ ಹೇಗೆ ಹೊರ ತರುತ್ತಾರೆ ಅನ್ನೋದು ಚಿತ್ರಕಥೆ” ಎಂದರು. ಇದನ್ನೂ ಓದಿ : ಹರೀಶ್ ವಯಸ್ಸು 36 ಹಾಸ್ಯ ಸಿನಿಮಾಗಾಗಿ ಟೈಟಲ್ ಸಾಂಗ್ ಹಾಡಿದ ಪುನೀತ್

ನಿತ್ಯಾ ಪಾತ್ರಕ್ಕೆ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ನಾಯಕಿಯಾಗಿ ನಟಿಸಿದ್ದು, ತುಳು ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ಅನೂಪ್ ಸಾಗರ್ ನಾಯಕನಾಗಿ ನಟಿಸಿದ್ದಾರೆ. ಖ್ಯಾತ ಬಹುಭಾಷಾ ನಟಿ ಸುಹಾಸಿನಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕಿರುತೆರೆಯ ಖ್ಯಾತ ನಿರ್ದೇಶಕ ವಿನು ಬಳಂಜ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರೆ, ಗಣೇಶ್ ಹೆಗ್ಡೆ ಛಾಯಾಗ್ರಾಹಕರರು.

Share This Article
Leave a Comment

Leave a Reply

Your email address will not be published. Required fields are marked *