ಕನ್ನಡದ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ವಿಧಿವಶ

Public TV
1 Min Read

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಚಿಂತಕ ಪ್ರೋ. ಮಲೆಯೂರು ಗುರುಸ್ವಾಮಿ (Maleyur Guruswamy) ಅವರು ಬುಧವಾರ ತಡರಾತ್ರಿ ವಿಧಿವಶರಾದರು.

ಹಿರಿಯ ಸಾಹಿತಿ ಗುರುಸ್ವಾಮಿ (75) ಅವರು ಕಳೆದ ಹಲವು ದಿನಗಳಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದೊಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿದ್ದರು. ಆದರೆ ಬುಧವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದನ್ನೂ ಓದಿ: ಕೆಎಂಎಫ್ ಹಾಲು ವಿತರಣೆಯಲ್ಲಿ ತೊಂದರೆ- ನಂದಿನಿ ಬೂತ್‍ಗಳಿಗೆ ಅರ್ಧಕರ್ಧ ಸಪ್ಲೈ

ಗುರುಸ್ವಾಮಿಯವರು 5ಕ್ಕೂ ಹೆಚ್ಚು ಕಾದಂಬರಿ ರಚನೆ ಮತ್ತು 10ಕ್ಕೂ ಹೆಚ್ಚು ಕೃತಿಗಳನ್ನ ಬರೆದಿದ್ದು, ಇವರು ರಾಜೋತ್ಸವ ಪ್ರಶಸ್ತಿ, ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜಿನರಾಗಿದ್ದರು. ಇವರ ಅಂತಿಮ ಸಂಸ್ಕಾರವನ್ನು ಸ್ವಗೃಹ ಚಾಮರಾಜನಗರ ಜಿಲ್ಲೆಯ ಮಲೆಯೂರಿನಲ್ಲಿ ಇಂದೇ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಫಾಲೋ ಮಾಡ್ತಾರೆ, ಟ್ರಕ್ ಹತ್ತಿಸಲು ಬರ್ತಾರೆ- ಶಾಸಕಿ ರೂಪಾಲಿ ನಾಯ್ಕ್‌ಗೆ ಜೀವ ಬೆದರಿಕೆ

Share This Article
Leave a Comment

Leave a Reply

Your email address will not be published. Required fields are marked *