ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್, ಸಿಹಿಕಹಿ ಚಂದ್ರು ಸೇರಿ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

Public TV
3 Min Read

ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿ ಪ್ರಕಟಗೊಂಡಿದೆ. ಸಿನಿಮಾ ನಟ ಅವಿನಾಶ್ (avinash), ಕಿರುತೆರೆ ನಟ, ನಿರ್ದೇಶಕ ಸಿಹಿಕಹಿ ಚಂದ್ರು, ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್, ಮೈಸೂರಿನ ರಾಮಕೃಷ್ಣ ಆಶ್ರಮ ಸೇರಿದಂತೆ 67 ಗಣ್ಯರಿಗೆ ಪ್ರಶಸ್ತಿ ಸಿಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ (Sunil Kumar) ಅವರು ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 67 ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಸಂಕೀರ್ಣ
ಸುಬ್ಬರಾಮ ಶೆಟ್ಟಿ ಆರ್.ಎ. ಸಂಸ್ಥೆಗಳು ಬೆಂಗಳೂರು, ಸೋಲಿಗರ ಮಾದಮ್ಮ, (ಚಾಮರಾಜನಗರ).

ಸೈನಿಕ
ಸುಬೇದಾರ್ ಬಿ.ಕೆ. ಕುಮಾರಸ್ವಾಮಿ (ಬೆಂಗಳೂರು),

ಪತ್ರಿಕೋದ್ಯಮ
ಹೆಚ್.ಆರ್ ಶ್ರೀಶಾ ಬೆಂಗಳೂರು, ಜಿಎಂ ಶಿರಹಟ್ಟಿ (ಗದಗ).

ವಿಜ್ಞಾನ – ತಂತ್ರಜ್ಞಾನ
ಕೆ. ಶಿವನ್ ಬೆಂಗಳೂರು, ಡಾ. ಬಿ.ಆರ್ ಬಳೂರಗಿ (ರಾಯಚೂರು).

ಕೃಷಿ
ಗಣೇಶ್ ತಿಮ್ಮಯ್ಯ(ಕೊಡಗು), ಚಂದ್ರಶೇಖರ್ ನಾರಾಯಣಪುರ (ಚಿಕ್ಕಮಗಳೂರು)

ಪರಿಸರ
ಸಾಲುಮರದ ನಿಂಗಣ್ಣ(ರಾಮನಗರ)

ಪೌರಕಾರ್ಮಿಕ
ಮಲ್ಲಮ್ಮ ಹೂವಿನಹಡಗಲಿ (ವಿಜಯನಗರ)

ಆಡಳಿತ
ಡಾ. ಎಲ್. ಎಚ್. ಮಂಜುನಾಥ್ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ಶಿವಮೊಗ್ಗ), ಮದನ್ ಗೋಪಾಲ್(ಬೆಂಗಳೂರು)

ಹೊರನಾಡು
ದೇವಿದಾಸ ಶೆಟ್ಟಿ (ಮುಂಬೈ), ಅರವಿಂದ ಪಾಟಿಲ್ (ಹೊರನಾಡು), ಕೃಷ್ಣಮೂರ್ತಿ ಮಾಂಜಾ (ತೆಲಂಗಾಣ)

ಹೊರದೇಶ
ರಾಜ್‍ಕುಮಾರ್ (ಗಲ್ಫ್ ರಾಷ್ಟ್ರ)

ವೈದ್ಯಕೀಯ
ಡಾ. ಎಚ್.ಎಸ್. ಮೋಹನ್ (ಶಿವಮೊಗ್ಗ), ಡಾ. ಬಸವಂತಪ್ಪ (ದಾವಣಗೆರೆ)

ಸಮಾಜಸೇವೆ
ರವಿ ಶೆಟ್ಟಿ (ದಕ್ಷಿಣ ಕನ್ನಡ), ಸಿ.ಕರಿಯಪ್ಪ (ಬೆಂಗಳೂರು ಗ್ರಾಮಾಂತರ), ಎಂ.ಎಸ್. ಕೋರಿ ಶೆಟ್ಟರ್ (ಹಾವೇರಿ), ಡಿ. ಮಾದೇಗೌಡ (ಮೈಸೂರು), ಬಿಲಬೀರ್ ಸಿಂಗ್ (ಬೀದರ್)

ವಾಣಿಜ್ಯೋದ್ಯಮ
ಬಿ.ವಿನಾಯ್ಡು (ಬೆಂಗಳೂರು), ಜಯರಾಮ ಬನಾನ್ (ಉಡುಪಿ), ಜಿ. ಶ್ರೀನಿವಾಸ್ (ಕೋಲಾರ್)

ರಂಗಭೂಮಿ
ತಿಪ್ಪಣಿ ಹೆಳವರ್ (ಯಾದಗಿರಿ), ಲಲಿತಾಬಾಯಿ ಚನ್ನದಾಸರ್ (ವಿಜಯಪುರ), ಗುರುನಾಥ್ ಹೂಗಾರ್ (ಕಲಬುರಗಿ), ಪ್ರಭಾಕರ ಜೋಶಿ – ತಾಳಮದ್ದಳೆ- ಯಕ್ಷಗಾನ (ಉಡುಪಿ), ಶ್ರೀಶೈಲ ಹುದ್ದಾರ್ (ಹಾವೇರಿ)

ಸಂಗೀತ
ನಾರಾಯಣ ಎಂ (ದಕ್ಷಿಣ ಕನ್ನಡ), ಅನಂತಾಚಾರ್ಯ ಬಾಳಾಚಾರ್ಯ (ಧಾರವಾಡ) ಅಂಜಿನಪ್ಪ ಸತ್ಯಾಡಿ ಮುಖವೀಣೆ ಕಲಾವಿದ (ಚಿಕ್ಕಬಳ್ಳಾಪುರ), ಅನಂತ ಕುಲಕರ್ಣಿ (ಬಾಗಲಕೋಟೆ)

ಜಾನಪದ
ಸಹಮದೇವಪ್ಪ ಈರಪ್ಪ ನಡಿಗೇರ್ (ಉತ್ತರ ಕನ್ನಡ), ಗುಡ್ಡ ಪಾಣಾರ-ದೈವ ನರ್ತಕ (ಉಡುಪಿ), ಕಮಲಮ್ಮ, ಸೂಲಗಿತ್ತಿ (ರಾಯಚೂರು), ಸಾವಿತ್ರಿ ಪೂಜಾರ್ (ಧಾರವಾಡ), ರಾಚಯ್ಯ ಸಾಲಿಮಠ್ (ಬಾಗಲಕೋಟೆ), ಮಹೇಶ್ವರ ಗೌಡ ಲಿಂಗದಹಳ್ಳಿ- ವೀರಗಾಸೆ (ಹಾವೇರಿ)

ಶಿಲ್ಪ ಕಲೆ
ಪರಶುರಾಮ್ ಪವಾರ್ ರಥಶಿಲ್ಪಿ (ಬಾಗಲಕೋಟೆ), ಹನುಮಂತಪ್ಪ ಬಾಳಪ್ಪ ಹುಕ್ಕೇರಿ (ಬೆಳಗಾವಿ)

ಚಿತ್ರಕಲೆ
ಸಣ್ಣರಂಗಪ್ಪ ಚಿತ್ರಕಾರ್ – ಕಿನ್ನಾಳ ಕಲೆ (ಕೊಪ್ಪಳ)

ಚಲನಚಿತ್ರ
ದತ್ತಣ್ಣ(ಚಿತ್ರದುರ್ಗ), ಅವಿನಾಶ್ (ಬೆಂಗಳೂರು)

ಕಿರುತರೆ
ಸಿಹಿ ಕಹಿ ಚಂದ್ರು(ಬೆಂಗಳೂರು)

ಯಕ್ಷಗಾನ
ಎಂ.ಎ.ನಾಯಕ್ (ಉಡುಪಿ), ಸುಬ್ರಹ್ಮಣ, ಧಾರೇಶ್ವರ (ಉತ್ತರ ಕನ್ನಡ), ಸರಪಾಡಿ ಅಶೋಕ್ ಶೆಟ್ಟಿ(ದಕ್ಷಿಣ ಕನ್ನಡ)

ಬಯಲಾಟ
ಅಡವಯ್ಯ ಚ ಹಿರೇಮಠ (ದೊಡ್ಡಾಟ) (ಧಾರವಾಡ), ಶಂಕರಪ್ಪ ಮಲ್ಲಪ್ಪ ಹೊರಪೇಟೆ (ಕೊಪ್ಪಳ) ಹೆಚ್. ಪಾಂಡುರಂಗಪ್ಪ(ಬಳ್ಳಾರಿ)

ಸಾಹಿತ್ಯ
ಶಂಕರ ಚಚಡಿ( ಬೆಳಗಾವಿ), ಕೃಷ್ಣೆಗೌಡ(ಮೈಸೂರು), ಅಶೋಕ್ ಬಾಬು ನೀಲಗಾ (ಬೆಳಗಾವಿ), ಪ್ರೊ. ಅ.ರಾ. ಮಿತ್ರ(ಹಾಸನ), ರಾಮಕೃಷ್ಣ ಮರಾಠೆ (ಕಲಬುರಗಿ)

ಶಿಕ್ಷಣ
ಕೋಟಿ ರಂಗಪ್ಪ(ತುಮಕೂರು), ಡಾ. ಎಂ.ಜಿ. ನಾಗರಾಜ್ ಸಂಶೋಧಕರು (ಬೆಂಗಳೂರು)

ಕ್ರೀಡೆ
ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ), ರಾಘವೇಂದ್ರ ಅಣ್ಣೇಕರ್ (ಬೆಳಗಾವಿ)

ನ್ಯಾಯಾಂಗ
ವೆಂಕಟಾಚಲಪತಿ (ಬೆಂಗಳೂರು), ನಂಜುಂಡ ರೆಡ್ಡಿ(ಬೆಂಗಳೂರು)

ನೃತ್ಯ
ಕಮಲಾಕ್ಷಾಚಾರ್ಯ (ದಕ್ಷಿಣ ಕನ್ನಡ)

ಸಂಸ್ಥೆ:
ರಾಮಕೃಷ್ಣ ಆಶ್ರಮ (ಮೈಸೂರು), ಲಿಂಗಾಯುತ ಪ್ರಗತಿಶೀಲ ಸಂಸ್ಥೆ (ಗದಗ), ಅಗಡಿ ತೋಟ(ಹಾವೇರಿ), ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ(ಬಾಗಲಕೋಟೆ), ಅಮ್ಮತ ಶಿಶು ನಿವಾಸ (ಬೆಂಗಳೂರು), ಸುಮನಾ ಫೌಂಡೇಷನ್ (ಬೆಂಗಳೂರು), ಯುವ ವಾಹಿನಿ ಸಂಸ್ಥೆ (ದಕ್ಷಿಣಕನ್ನಡ), ನೆಲೆ ಫಂಡೇಶನ್- ಅನಾಥ ಮಕ್ಕಳ ಪುನರ್ವಸತಿ ಕೇಂದ್ರ (ಬೆಂಗಳೂರು), ನಮ್ಮನೆ ಸುಮ್ಮನೆ- ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ) (ಬೆಂಗಳೂರು), ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವದ್ಧಿ ಟ್ರಸ್ಟ್ (ಮಂಡ್ಯ)

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *