ಗೋವಾದಲ್ಲಿ ಕನ್ನಡ ನಿರ್ಮಾಪಕರ ಗಲಾಟೆ

Public TV
1 Min Read

ಚಿತ್ರರಂಗದ ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೆಂದು ಗೋವಾಗೆ (Goa)  ಹೋಗಿದ್ದ ನಿರ್ಮಾಪಕರು ಗಲಾಟೆ ಮಾಡಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber), ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಗೋವಾ ಪ್ರವಾಸ ಬೆಳೆಸಿದ್ದರು. ಮಾತಿಗೆ ಮಾತು ಬೆಳೆದು ಅದು ಗಲಾಟೆ ಸ್ವರೂಪ ಪಡೆದುಕೊಂಡಿದೆ.

ಗೋವಾದ ಹಿಬೀಸ್ ರೆಸಾರ್ಟ್ನಲ್ಲಿ ನಿನ್ನೆ ರಾತ್ರಿ (ಮೇ ೨೭) ಚರ್ಚೆ ನಡೆಯುವಾಗ ಮಾತಿಗೆ ಮಾತು ಬೆಳೆದು ಸಣ್ಣದಾಗಿ ಗಲಾಟೆ ಶುರುವಾಗಿದೆ. ಗಲಾಟೆ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ನಿರ್ಮಾಪಕರಾದ ರಥಾವರ ಮಂಜುನಾಥ್, .ಗಣೇಶ್ ಹಾಗೂ ಸತೀಶ್ ಆರ್ಯ ಮೂವರು ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಲ್ಲಿ ಮುಕ್ತಾವಾಗಿದೆ.

ಗಲಾಟೆಯ ನಂತರ ಸತೀಶ್ ಆರ್ಯ, .ಗಣೇಶ್ ಹಾಗೂ ರಥಾವರ ಮಂಜುನಾಥ್ ಅವರನ್ನು ಬೆಂಗಳೂರಿಗೆ ವಾಪಸ್ಸು ಕಳುಹಿಸಲಾಗಿದೆಯಂತೆ. ಗೋವಾ ಟ್ರಿಪ್ಗೆ ಹೋದ ನಿಯೋಗದ ಸದಸ್ಯರು, ಪದಾಧಿಕಾರಿಗಳು ನಾಳೆ (ಮೇ ೨೯) ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ.ಸುರೇಶ್, ಉಮೇಶ್ ಬಣಕಾರ್, ಆಸ್ಕರ್ ಕೃಷ್ಣ, ಭಾಮಾ ಹರೀಶ್, ಭಾಮಾ ಗಿರೀಶ್, ಟೇಸಿ ವೆಂಕಟೇಶ್, ಸತೀಶ್ ಆರ್ಯ, ರಥಾವರ ಮಂಜುನಾಥ್, .ಗಣೇಶ್ ಸೇರಿ ಮುಂತಾದವರು ಗೋವಾ ಪ್ರವಾಸಕ್ಕೆ ತೆರಳಿದ್ದರು.

ಸದ್ಯ ಕನ್ನಡ ಚಿತ್ರರಂಗ ಚಿತ್ರರಂಗ ಸಂಕಷ್ಟವನ್ನ ಎದುರಿಸುತ್ತಿದೆ. ಸಂದರ್ಭದಲ್ಲಿ ವಾಣಿಜ್ಯ ಮಂಡಳಿಗೆ ಪಾರ್ಟಿ, ಜಾಲಿ ಮೂಡು ಬೇಕಿತ್ತಾ ಅನ್ನೋದು ಕೆಲವರ ಪ್ರಶ್ನೆಯಾಗಿದೆ. ಆದ್ರೆ ಅಲ್ಲಿ ನಡೆದ ಘಟನೆ ಯಾವುದಕ್ಕಾಗಿ..? ಏನೇನಾಯ್ತು ಅನ್ನೋದು ವಾಪಾಸ್ಸಾದ ಮೇಲೆ ತಿಳಿಯಲಿದೆ. ಅಲ್ಲಿಯವರೆಗೆ ಕಾದು ನೋಡಬೇಕು.

Share This Article