ಕಿಸ್: ಸೂಪರ್ ಹಿಟ್ ಹಾಡುಗಳ ಮೆರವಣಿಗೆ!

Public TV
1 Min Read

ಬೆಂಗಳೂರು:  ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಕಿಸ್ ಚಿತ್ರದ ಹಾಡುಗಳ ಹಂಗಾಮಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಮುದ್ದಾದ ಜೋಡಿ, ಅದಕ್ಕೆ ತಕ್ಕುದಾದ ಹಾಡುಗಳ ಮೂಲಕವೇ ಕಿಸ್ ಬಗ್ಗೆ ಪ್ರೇಕ್ಷಕರೆಲ್ಲರಿಗೂ ಮೋಹ ಮೂಡಿಕೊಂಡಿದೆ. ಈ ದಿಸೆಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್ ಕಿಸ್ ಮೂಲಕವೂ ಹಾಡುಗಳೊಂದಿಗೆ ಸಿನಿಮಾ ಪ್ರೇಮಿಗಳನ್ನು ತಾಕುವ ತಮ್ಮತನವನ್ನು ಮುಂದುವರೆಸಿದ್ದಾರೆ.

 

ಎ.ಪಿ ಅರ್ಜುನ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಿಗೆಲ್ಲ ಹಾಡುಗಳ ಬಗ್ಗೆ ಅಗಾಧವಾದ ನಿರೀಕ್ಷೆಗಳಿರುತ್ತವೆ. ಅಂಬಾರಿ ಚಿತ್ರದಿಂದ ಆರಂಭವಾಗಿ ಇಲ್ಲಿಯವರೆಗೂ ಅರ್ಜುನ್ ಅದನ್ನು ಸುಳ್ಳು ಮಾಡಿಯೇ ಇಲ್ಲ. ಆದರೆ ಕಿಸ್ ಹಾಡುಗಳು ಮಾತ್ರ ಅವರ ಈವರೆಗಿನ ದಾಖಲೆಗಳನ್ನೆಲ್ಲ ಬ್ರೇಕ್ ಮಾಡಿ ಮುನ್ನುಗ್ಗುತ್ತಿವೆ. ವಿ. ಹರಿಕೃಷ್ಣ ಮತ್ತು ಎ.ಪಿ ಅರ್ಜುನ್ ಜೋಡಿಯ ಮೆಲೋಡಿ ಕಾಂಬಿನೇಷನ್ ಕಿಸ್ ಮೂಲಕವೂ ಯಶಸ್ವಿಯಾಗಿ ಮುಂದುವರೆದಿದೆ.

ಆರಂಭದಲ್ಲಿ ಬಿಡುಗಡೆಯಾಗಿದ್ದ ಶೀಲ ಸುಶೀಲ ಯೂ ಡೋಂಟುವರಿ ಹಾಡಿನ ಮೂಲಕವೇ ಕಿಸ್ ಏಕಾಏಕಿ ಸಂಚಲನ ಸೃಷ್ಟಿಸಿತ್ತು. ಅದಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ವೀವ್ಸ್ ಬೆರಗಾಗುವಂತಿತ್ತು. ಇದೀಗ ಮಿಲಿಯಗಟ್ಟಲೆ ವೀವ್ಸ್‍ನೊಂದಿಗೆ ಅದು ಮುನ್ನುಗ್ಗುತ್ತಲೇ ಇದೆ. ಅದಾದ ನಂತರ ಬಂದ ಮೆಲೋಡಿ ಹಾಡಿಗೂ ಜನ ಫಿದಾ ಆಗಿದ್ದಾರೆ. ಇದೇ ಬಿಸಿಯಲ್ಲೀಗ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಎಂಬ ಹಾಡು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿ ಬಿಡುಗಡೆಗೊಳಿಸಿರೋ ಈ ಹಾಡು ಕೂಡಾ ಹಿಟ್ ಆಗಿದೆ.

ಇನ್ನೇನು ಬಿಡುಗಡೆಗೆ ಅಣಿಗೊಂಡಿರೋ ಕಿಸ್ ಹಾಡುಗಳಷ್ಟೂ ಮೋಹಕವಾದ ಕಥೆಯನ್ನೂ ಒಳಗೊಂಡಿದೆ. ಕಿಸ್ ಎಂಬ ಪದವೇ ಅನೇಕರಲ್ಲಿ ಅವರದ್ದೇ ಆದ ನವಿರು ಭಾವಗಳು ಮೂಡಿಕೊಳ್ಳುತ್ತವೆ. ಅಂಥಾದ್ದೇ ನವಿರುತನ ಹೊಂದಿರೋ ಕಥೆಯಿರುವ ಈ ಸಿನಿಮಾದಲ್ಲಿ ಅಶ್ಲೀಲತೆಯ ಲವಲೇಷವೂ ಇಲ್ಲ. ಇದೊಂದು ಮುದ್ದಾದ ಲವ್ ಸ್ಟೋರಿ. ಆದದ್ದು ಬರೀ ಪ್ರೀತಿಗೆ ಮಾತ್ರವೇ ಸೀಮಿತವಾಗಿಲ್ಲ ಅನ್ನೋದು ಚಿತ್ರತಂಡದ ಮಾತು.

Share This Article
Leave a Comment

Leave a Reply

Your email address will not be published. Required fields are marked *