‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!

Public TV
2 Min Read

ಬೆಂಗಳೂರು: ಮೊಗ್ಗಿನ ಮನಸ್ಸಿನ ಸುಂದರಿ ಶುಭಾ ಪೂಂಜಾ ‘ಕೆಲವು ದಿನಗಳ ನಂತರ’ ಎಂಬ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಗೂಗಲ್ ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ನಟಿಸುವ ಮೂಲಕ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು “ಕೆಲವು ದಿನಗಳ ನಂತರ” ಎಂಬ ತಯಾರಾಗುತ್ತಿದ್ದು, ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದೆ. ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದೆ. ಅಷ್ಟೇ ಅಲ್ಲದೇ ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿದ್ದು, ಸಿನಿಮಾ ಸಸ್ಪೆನ್ಸ್ ನಿಂದ ಕೂಡಿದೆ ಅಂತಾ ಚಿತ್ರತಂಡ ತಿಳಿಸಿದೆ. ಈ ಸಿನಿಮಾದ ವಿಶೇಷತೆ ಎಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.

ಕೆಲವು ದಿನಗಳ ನಂತರ ಚಿತ್ರತಂಡದಲ್ಲಿ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಕಲಾವಿದರನ್ನು ನೋಡಿದ್ರೆ ಸಿನಿಮಾ ಫುಲ್ ಕಾಮಿಡಿ ಇದೆ ಅಂತಾ ತಿಳಿದ್ರೆ ತಪ್ಪಾಗುತ್ತದೆ. ಟೀಸರ್ ನಲ್ಲಿ ಹಾರರ್ ಸಿನಿ ಶೈಲಿಯಲ್ಲಿ ಮೂಡಿಬಂದಿದ್ದು ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಮೂಲಕ 6 ತಿಂಗಳ ಮಗುವನ್ನು ಸಹ ಸೃಷ್ಟಿಸಲಾಗಿದೆ. ಕಥೆ ಮಗುವಿನ ಸುತ್ತ ಕೇಂದ್ರಿಕೃತವಾಗಿರುವ ಸಾಧ್ಯತೆಗಳಿವೆ. ಚಿತ್ರತಂಡ ಟೀಸರ್ ನಲ್ಲಿ ಎಲ್ಲಿಯೂ ಪಾತ್ರಗಳ ಪರಿಚಯ ಮತ್ತು ಕಥೆಯನ್ನು ಸಹ ಬಿಟ್ಟುಕೊಟ್ಟಿಲ್ಲ.

ಕೆಲವು ದಿನಗಳ ನಂತರ ಮುತ್ತುರಾಜ್ ಹೆಚ್.ಪಿ ಅವರು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಶ್ರೀನಿ ರವರ ನಿರ್ದೇಶನವನ್ನು ಚಿತ್ರ ಹೊಂದಿದೆ. ಶುಭಾ ಪೂಂಜಾ, ಮಜಾ ಟಾಕೀಸ್ ಖ್ಯಾತಿಯ ಪವನ್, ಕಾಮಿಡಿ ಕಿಲಾಡಿ ಲೋಕೇಶ್, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್ ಮತ್ತು ಶರಣಯ್ಯ ಮುಂತಾದ ತಾರಾಬಳಗ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಸದ್ಯಕ್ಕೆ ಈ ಚಿತ್ರತಂಡ ಶೂಟಿಂಗ್ ಮುಗಿಸಿ, ಆಡಿಯೋ ರಿಲೀಸ್ ಮಾಡುವ ಹಂತದಲ್ಲಿದೆ. ಮೇ ಕೊನೆವಾರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಟೀಸರ್ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡಿರುವ ‘ಕೆಲವು ದಿನಗಳ ನಂತರ’ ರಿಲೀಸ್ ಆದ್ಮೇಲೆ ನೋಡುಗರ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *