ನೂರನೇ ದಿನದತ್ತ ಕನ್ನೇರಿ ಗೆಲುವಿನ ಹೆಜ್ಜೆ

Public TV
1 Min Read

ವತ್ತು ಸಿನಿಮಾ ಮಾಡುವುದು ಎಷ್ಟು ಕಷ್ಟವೋ? ಅದೇ ರೀತಿ ಜನರಿಗೆ ತಲುಪಿಸಿ ಅವರಿಂದ ಮೆಚ್ಚುಗೆ ಪಡೆಯುವುದು ಬಹುದೊಡ್ಡ ಕಷ್ಟ. ಈಗಂತೂ ಒಂದು ವಾರ ಹೆಚ್ಚೆಂದರೆ ಎರಡು ವಾರ ಸಿನಿಮಾಗಳು ಥಿಯೇಟರ್‌ನಲ್ಲಿ ನಿಲ್ಲುವುದು ಅಸಾಧ್ಯ. ಆದರೆ ಕನ್ನೇರಿ ಸಿನಿಮಾ ಭರ್ತಿ 75 ದಿನ ಪೂರೈಸಿ ನೂರನೇ ದಿನದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಕಾಡಿನಲ್ಲಿಯೇ ನೆಮ್ಮದಿ ಕಂಡುಕೊಂಡು, ಕಾಡನ್ನೇ ಅದ್ಭುತ ಪ್ರಪಂಚ ಎಂದುಕೊಂಡಿದ್ದ ಬುಡಕಟ್ಟು ಮಂದಿಯನ್ನು ಒಕ್ಕಲೆಬ್ಬಿಸಿದ್ದ ಮಹಿಳಾ ಪ್ರಧಾನ ಕನ್ನೇರಿ ಸಿನಿಮಾವನ್ನು ನಿರ್ದೇಶಕ ನೀನಾಸಂ ಮಂಜು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲೆಬ್ಬಿಸಿದ ಬಳಿಕ ಅಲ್ಲಿನ ಜನರ ಸ್ಥಿತಿಗತಿ, ಮುಖ್ಯವಾಗಿ ಹೆಣ್ಣುಮಕ್ಕಳ ಸ್ಥಿತಿ ಏನಾಯಿತು ಎಂಬೆಲ್ಲಾ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಈ ಕಥೆ ಪ್ರೇಕ್ಷಕನ ಹೃದಯ ತಟ್ಟಿದೆ. ಇದನ್ನೂ ಓದಿ: ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ: ಮಕ್ಕಳಿಗೆ ಮೇಘನಾ ರಾಜ್ ಸಲಹೆ

ಹೇಳಿಕೇಳಿ ನಿರ್ದೇಶಕ ನೀನಾಸಂ ಮಂಜು ರಂಗಭೂಮಿಯಲ್ಲಿ ಪಳಗಿದ ಪ್ರತಿಭೆ. ಹೀಗಾಗಿ ಅವರ ಕಥೆಗಳಲ್ಲಿ ಗಟ್ಟಿತನ ಇರುತ್ತದೆ ಎನ್ನುವುದಕ್ಕೆ ಕನ್ನೇರಿ ಸಿನಿಮಾವೇ ತಾಜ ಉದಾಹರಣೆ. ಈ ಸಿನಿಮಾ ಅಂತಲ್ಲ ಕಳೆದ ಬಾರಿ ಜನಮನ್ನಣೆ ಪಡೆದ ಮೂಕ್ಕಹಕ್ಕಿ ಸಿನಿಮಾವೂ ಗಟ್ಟಿತನ ಕಂಟೆಂಟಿನ ಸಿನಿಮಾ. ಪ್ರತಿ ಬಾರಿಯೂ ಸದಾಭಿರುಚಿ ಸಿನಿಮಾಗಳನ್ನು ಮಂಜು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದಾರೆ. ಈ ಬಾರಿ ಕನ್ನೇರಿ ಚಿತ್ರದ ಮೂಲಕ ನೀನಾಸಂ ಮಂಜು ಮತ್ತೊಮ್ಮೆ ಭರಪೂರ ಮನರಂಜನೆ ನೀಡಿದ್ದಾರೆ. ಇದನ್ನೂ ಓದಿ: ಅಂತಿಂಥ ಹೆಣ್ಣು ಇವಳಲ್ಲಾ ಎಂದು ಪತ್ನಿಯನ್ನು ಹೊಗಳಿದ ನವರಸ ನಾಯಕ ಜಗ್ಗೇಶ್

ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *