ಹೊಸತನದ ಪ್ರಯೋಗದೊಂದಿಗೆ ಹರಿಕಥೆ ಅಲ್ಲ ಗಿರಿಕಥೆ ಎಂಟ್ರಿಗೆ ತಯಾರಿ..!

Public TV
2 Min Read

ಬಿಡುಗಡೆಗೂ ಮುನ್ನವೇ ಸಖತ್ ಟಾಕ್ ಕ್ರಿಯೇಟ್ ಮಾಡಿದೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ. ರಿಷಬ್ ಶೆಟ್ಟಿ ಅವರ ನಟನೆಯಲ್ಲಿ ಇಂತಹದ್ದೊಂದು ಸಿನಿಮಾ ಮೂಡಿಬರಲಿದೆ ಅಂದಾಗ್ಲೇ ಈ ಚಿತ್ರದಲ್ಲಿ ಸಂತಿಂಗ್ ಸ್ಪೆಷಾಲಿಟಿ ಇದ್ದೇ ಇರುತ್ತೆ ಅನ್ನೋದು ಕನ್ಫರ್ಮ್ ಆಗಿತ್ತು. ಚಿತ್ರದ ಟೀಸರ್ ಹಾಗೂ ಟ್ರೈಲರ್ ಗಳು ರಿವೀಲ್ ಆದ್ಮೇಲೆ ಮತ್ತೆ ಅದು ಖಾತ್ರಿಯಾಗಿದೆ.

ನಿರ್ದೇಶಕ ಗಿರಿಕೃಷ್ಣ ಅವರು ರಿಷಬ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಕಥೆಯನ್ನು ಸೃಷ್ಟಿಸಿದ್ದರಂತೆ. ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದ ಭಾಗವಾಗಿ ಗಿರಿಕೃಷ್ಣ ಅವರು ಕಾರ್ಯ ನಿರ್ವಹಿಸಿದ್ರು. ಆ ಸಿನಿಮಾ ಸೂಪರ್ ಹಿಟ್ ಆದ ಸಂದರ್ಭದಲ್ಲೇ ಇಂತಹದ್ದೊಂದು ಕಥೆಯ ಬಗ್ಗೆ ಅವರು ರಿಷಬ್ ಅವರ ಬಳಿ ಪ್ರಸ್ತಾಪಿಸಿದ್ರಂತೆ. ನಿರ್ದೇಶಕ ಗಿರಿಕೃಷ್ಣ ಅವರಿಗೆ ಒಳಿತಾಗಲಿ ಅನ್ನುವ ಕಾರಣದಿಂದ್ಲೇ ಈ ಸಿನಿಮಾ ಮಾಡಲು ರಿಷಬ್ ಒಪ್ಪಿಗೆ ಸೂಚಿಸಿದ್ರಂತೆ. ಆದರೆ ಕಥೆ, ಚಿತ್ರಕತೆ ಹಾಗೂ ಪಾತ್ರಗಳೆಲ್ಲವೂ ಇಷ್ಟವಾಗದೇ ಅಷ್ಟು ಸುಲಭವಾಗಿ ರಿಷಬ್ ಓಕೆ ಅನ್ನೋದಿಲ್ಲ. ಈ ಚಿತ್ರದಲ್ಲಿನ ನಾಯಕನ ಪಾತ್ರ ಹಾಗೂ ಕಥೆ ಹೆಚ್ಚು ಮಹತ್ವಪೂರ್ಣವಾಗಿದೆ. ಹೀಗಾಗಿಯೇ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಬಹಳ ಇಷ್ಟಪಟ್ಟು ನಿರ್ದೇಶಕ ಗಿರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ, ಎಲ್ಲಾ ವಿಭಾಗಗಳಲ್ಲಿಯೂ ಇದ್ದ ಹೊಸತನ ಹಾಗೂ ನವ ಉತ್ಸಾಹದ ತಂಡದೊಂದಿಗೆ ಖುಷಿಯಿಂದಲೇ ಭಾಗಿಯಾಗಿದ್ದಾರೆ.

ಕೊರೋನಾ ಲಾಕ್‍ಡೌನ್ ಬಂದು ನಿರ್ದೇಶಕ ಗಿರಿಕೃಷ್ಣ ಖಾಯಿಲೆಗೆ ಬಿದ್ದಿದ್ದರು. ಹೀಗಾಗಿ ಆ ಸಮಯದಲ್ಲಿ ಸಿನಿಮಾ ನಿಂತೇ ಹೋಗುವಂಥಾ ಅಪಾಯವಿತ್ತು. ಅಂತಹ ಸಂದರ್ಭದಲ್ಲಿ ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡರು. ಜೊತೆಗೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ಹೊಸ ಸ್ಪರ್ಶವನ್ನೂ ನೀಡಿದ್ರು. ಇದನ್ನೂ ಓದಿ: ತುರ್ತು ನಿರ್ಗಮನ: ದಶಕಗಳ ನಂತರ ಪ್ರತ್ಯಕ್ಷರಾದ ಸುನೀಲ್

ಸಿನಿಮಾ ಮಾಡೋದಕ್ಕಾಗಿ ಸಾಕಷ್ಟು ಕಷ್ಟ ಪಟ್ಟಂತಹ ಕಥೆಗಳೇ ಅನೇಕ ಬಾರಿ ಸಿನಿಮಾಗಳಾದ ಉದಾಹರಣೆಗಳಿವೆ. ಸಿನಿಮಾ ಗುಂಗು ಹತ್ತಿಸುಕೊಂಡಿರುವವರ ಕಥೆಯೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಹೀಗೆ ಸಿನಿಮಾ ಕನಸು ಹೊತ್ತು ಗಾಂಧೀನಗರಕ್ಕೆ ಆಗಮಿಸುವವರ ಕಥೆಗಳಿಗೂ, ಸಿನಿಮಾ ಕಥೆಗೂ ಅವಿನಾಭಾವ ನಂಟಿರೋದಂತೂ ನಿಜ. ಅದೇ ರೀತಿ ಫಿಲ್ಮ್ ಮೇಕರ್ ಒಬ್ಬನ ಕಥೆಯನ್ನೇ ಆಧರಿಸಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಮಾಡಲಾಗಿದೆ. ಆದ್ರೆ ಈ ಚಿತ್ರದ ಕಥೆ ಇದುವರೆಗೂ ಬಂದಿರುವ ಕಥೆಗಳಿಗಿಂತ ಬಹಳ ವಿಭನ್ನವಾಗಿರಲಿದೆ ಅನ್ನೋದನ್ನು ಚಿತ್ರತಂಡ ಟ್ರೈಲರ್ ನಲ್ಲಿಯೇ ತಿಳಿಸಿದೆ. ಚಿತ್ರದಲ್ಲಿನ ಮೂರು ಗಿರಿಗಳಲ್ಲಿ ಪ್ರಧಾನವಾದ ಡೈರೆಕ್ಟರ್ ಗಿರಿ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಈಗಾಗ್ಲೇ ಎಲ್ಲರ ಗಮನ ಸೆಳೆದಿದೆ.

ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಕಥೆ ಹಾಗೂ ಪಾತ್ರವರ್ಗದಲ್ಲಿ ಹೊಸತನವಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನೋರಂಜನೆಯೂ ಈ ಚಿತ್ರದಲ್ಲಿದೆ. ಇನ್ನೂ ಈ ಸಿನಿಮಾ ರಿಷಬ್ ಶೆಟ್ಟಿ ಅವರ ಸಿನಿ ಕೆರಿಯರ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. ಇದೇ ತಿಂಗಳ 23ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *