ಹೊಂಬಾಳೆಗೆ ಮತ್ತೊಂದು ಗರಿ- WAVES 2025ರಲ್ಲಿ ಹೊಂಬಾಳೆ ಸಂಸ್ಥೆಯ ಸಹ ಸಂಸ್ಥಾಪಕ ಭಾಗಿ

Public TV
1 Min Read

ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ 2025ರಲ್ಲಿ (World Audio Visual and Entertainment Summit) ಸ್ಯಾಂಡಲ್‌ವುಡ್‌ ಪ್ರತಿನಿಧಿಸಿ ಹೊಂಬಾಳೆ ಸಂಸ್ಥೆಯ ಸಹ- ಸಂಸ್ಥಾಪಕ ಚಲುವೇ ಗೌಡ ಭಾಗಿಯಾಗಿದ್ದರು. ಈ ವೇಳೆ ಚರ್ಚೆಯಲ್ಲಿ, ‘ಕಾಂತಾರ ಭಾಗ 1’ ಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಕಾರ್ಯತಂತ್ರ ರೂಪಿಸಿ ಸಿದ್ಧಪಡಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:WAVES 2025: ನರೇಂದ್ರ ಮೋದಿ ಫೈಟರ್, ಯಾವ್ದೇ ಸವಾಲು ಎದುರಿಸುತ್ತಾರೆ- ರಜನಿಕಾಂತ್

ವೇವ್ಸ್‌ ಸಮ್ಮೇಳನಕ್ಕೆ ಎಲ್ಲಾ ಭಾಷೆಯ ಚಿತ್ರರಂಗಕ್ಕೆ ಆಹ್ವಾನ ನೀಡಲಾಗಿದೆ. ಮೊದಲ ಬಾರಿಗೆ ಕನ್ನಡದ ಸಂಸ್ಥೆಯಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್‌ಕೂಡ ಭಾಗವಹಿಸಿರೋದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಈ ಮೂಲಕ ಕೆಜಿಎಫ್‌ 2, ಕಾಂತಾರ ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ವೇವ್ಸ್‌ ಆಯೋಜಿಸಿದ ಚರ್ಚೆಯಲ್ಲಿ ‘ಆರ್‌ಆರ್‌ಆರ್’ (RRR) ಚಿತ್ರದ ಸಂಕಲನಕಾರರಾದ ಎ. ಶ್ರೀಕರ್ ಪ್ರಸಾದ್ ಮತ್ತು ಆಸ್ಕರ್ ಸಮಿತಿಯ ಸದಸ್ಯ ಉಜ್ವಲ್ ಅವರೊಂದಿಗೆ ಚಲುವೇ ಗೌಡ ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

ಮೇ 1ರಂದು ವೇವ್ಸ್ ಸಮ್ಮೇಳನಕ್ಕೆ ಪಿಎಂ ನರೇಂದ್ರ ಮೋದಿ ಅವರು ಅದ್ಧೂರಿಯಾಗಿ ಚಾಲನೆ ನೀಡಿದ್ದರು. ರಜನಿಕಾಂತ್,  ಮೆಗಾಸ್ಟಾರ್ ಚಿರಂಜೀವಿ, ಹೇಮಾ ಮಾಲಿನಿ, ಮೋಹನ್‌ಲಾಲ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ದೀಪಿಕಾ ಪಡುಕೋಣೆ, ರಾಜಮೌಳಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Share This Article