ವಿಜಯಪುರ: ಬಿ.ಸರೋಜಾದೇವಿ ಅವರ ಸಾವಿನಿಂದ ಇಂದು ಕಲಾಜಗತ್ತು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಂತಾಪ ಸೂಚಿಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ನಾಡು ಕಂಡಂತಹ ಪ್ರತಿಭಾವಂತೆ. ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ಒಬ್ಬ ಅಪ್ರತಿಮ ಕಲಾವಿದೆ. ಬಿ.ಸರೋಜಾದೇವಿ ಅವರ ಸಾವಿನಿಂದ ಇಂದು ಕಲಾಜಗತ್ತು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಅವರ ಸಾವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು.ಇದನ್ನೂ ಓದಿ: ಪುದುಚೆರಿಯಲ್ಲಿ ಖ್ಯಾತ ಮಾಡೆಲ್ ಸ್ಯಾನ್ ರೆಚಲ್ ಆತ್ಮಹತ್ಯೆ
ಇದೇ ವೇಳೆ ಶಕ್ತಿ ಯೋಜನೆಯ ಬಗ್ಗೆ ಮಾತನಾಡಿ, 5 ಗ್ಯಾರಂಟಿ ಯೋಜನೆಗಳನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದ್ದೆವು. ನಾವು ಕ್ಯಾಬಿನೆಟ್ ಸಭೆ ಮಾಡಿ ಕೂಡಲೇ ಅವುಗಳನ್ನು ಜಾರಿಗೆ ತರುತ್ತೇವೆ ಎಂದು ತೀರ್ಮಾನೆ ಮಾಡಿದ್ದೆವು. ಅದರಂತೆ 2023ರ ಮೇ 20ರಂದು ಅಧಿಕಾರಕ್ಕೆ ಬಂದೆವು. ಬಳಿಕ ಜೂ.11ಕ್ಕೆ ಶಕ್ತಿ ಯೋಜನೆಯನ್ನು ಜಾರಿಗೆ ತಂದೆವು. ಅಂದಿನಿಂದ ಈವರೆಗೂ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇಂದು 500 ಕೋಟಿ ಮಹಿಳೆಯರು ಸಂಚರಿಸಿದ್ದಾರೆ. ಇದಕ್ಕೆ ಸಾಂಕೇತಿಕವಾಗಿ ಟಿಕೆಟ್ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದರು.
ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು.
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ… pic.twitter.com/ZOVdrXGqlp
— Siddaramaiah (@siddaramaiah) July 14, 2025
ಸಿಗಂದೂರು ಸೇತುವೆ ವಿಚಾರವಾಗಿ ನಿತಿನ್ ಗಡ್ಕರಿಗೆ ಪತ್ರ ಬರೆದ ಬಗ್ಗೆ ಮಾತನಾಡಿ, ಇಂದು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯಾರು ಭಾಗಿಯಾಗಿಲ್ಲ, ನನಗೆ ಆಹ್ವಾನಿಸಿಲ್ಲ, ಹಾಗಾಗಿ ಗಡ್ಕರಿಯವರಿಗೆ ಕರೆ ಮಾಡಿದೆ. ಆಗ ಅವರು ಕಾರ್ಯಕ್ರಮ ಮುಂದಕ್ಕೆ ಹಾಕುವುದಾಗಿ ತಿಳಿಸಿದರು. ಬಳಿಕ ಪತ್ರ ಬರೆದೆ. ಬಿಜೆಪಿ ನಾಯಕರು ಒತ್ತಾಯಿಸಿರಬಹುದು, ನನಗೆ ಏನು ಹೇಳದೇ ಮಾಡಿದ್ದಾರೆ. ಸದ್ಯ ನಾನು ಇಂಡಿ ತಾಲೂಕಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೊರಟಿದ್ದೇನೆ. ಸದ್ಯ ಸಿಗಂದೂರು ಕಾರ್ಯಕ್ರಮಕ್ಕೆ ನಾವ್ಯಾರು ಹೋಗುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಸರೋಜಾದೇವಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು – ಬಿವೈವಿ