ಆತ್ಮಹತ್ಯೆ ಮಾಡಿಕೊಂಡ ಪತಿ ಗುರುಪ್ರಸಾದ್‌ ನೋಡಲು ಕಣ್ಣೀರಿಡುತ್ತಲೇ ಧಾವಿಸಿದ 2ನೇ ಪತ್ನಿ

Public TV
1 Min Read

ಟ, ನಿರ್ದೇಶಕ ಗುರುಪ್ರಸಾದ್‌ (Guruprasad) ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಮಾದನಾಯಕನಹಳ್ಳಿ ಅಪಾರ್ಟ್‌ಮೆಂಟ್‌ಗೆ ಕಣ್ಣೀರಿಡುತ್ತಲೇ ಅವರ ಎರಡನೇ ಪತ್ನಿ ಸುಮಿತ್ರಾ ಧಾವಿಸಿದರು.

ಎರಡನೇ ಪತ್ನಿ ಸಮ್ಮುಖದಲ್ಲಿ ಗುರುಪ್ರಸಾದ್‌ ಅವರ ಮೃತದೇಹವನ್ನು ಪೊಲೀಸರು ಕೆಳಗಿಳಿಸಿದರು. ನಂತರ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಇದನ್ನೂ ಓದಿ: ವರ್ಷದಲ್ಲಿ ಮೂರು ಮನೆಯನ್ನು ಬದಲಿಸಿದ್ದ ಗುರುಪ್ರಸಾದ್‌

ಕಾರಣಾಂತರಗಳಿಂದ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಗುರುಪ್ರಸಾದ್‌ ಕಳೆದ ವರ್ಷವಷ್ಟೇ ಎರಡನೇ ಮದುವೆಯಾಗಿದ್ದರು. ಇತ್ತೀಚೆಗೆ ಎರಡನೇ ಪತ್ನಿಯಿಂದಲೂ ದೂರವಿದ್ದರು. ಕಳೆದ ಎರಡು-ಮೂರು ತಿಂಗಳಿಂದ 2ನೇ ಪತ್ನಿ ಮಗುವಿನೊಂದಿಗೆ ತವರು ಮನೆಯಲ್ಲಿದ್ದರು.

ಕಳೆದ ಕೆಲ ದಿನಗಳಿಂದ ನ್ಯೂ ಹೆವೆನ್‌ ಅಪಾರ್ಟ್‌ಮೆಂಟ್‌ನಲ್ಲಿ ಗುರುಪ್ರಸಾದ್‌ ಒಬ್ಬಂಟಿಯಾಗಿ ವಾಸವಾಗಿದ್ದರು. ಇದನ್ನೂ ಓದಿ: ಗುರುಪ್ರಸಾದ್ ಕೊನೆಯ ಚಾಟ್ ಏನಾಗಿತ್ತು?: ಸಂಬಂಧಿ ರವಿ ದೀಕ್ಷಿತ್ ಹೇಳೋದೇನು?

Share This Article