ನಾನು ಬಯಸಿದಾಗ ನನ್ನೊಟ್ಟಿಗಿರಲಿಲ್ಲ, ದೂರ ಹೋಗ್ಬೇಕು ಅಂದಾಗ ಹತ್ತಿರ ಬರ್ತಿದ್ರು: ಸಂತ್ರಸ್ತ ನಟಿ ಭಾವುಕ

Public TV
2 Min Read

ಎರಡೂವರೆ ವರ್ಷಗಳ ಹಿಂದಷ್ಟೇ ಪರಿಚಯವಾಗಿತ್ತು. ಒಂದು ವರ್ಷ ಅಷ್ಟೇ ಜೊತೆಗೆ ಇದ್ದಿದ್ದು. ನಾನು ಬಯಸಿದಾಗ ಅವರು ನನ್ನೊಟ್ಟಿಗೆ ಇರುತ್ತಿರಲಿಲ್ಲ. ಹೇಳದೇ ಕೇಳದೇ ವಿದೇಶ ಹೋಗಿಬಿಡ್ತಿದ್ರು. ಒಂದೊಂದು ತಿಂಗಳು ಸಂಪರ್ಕಕ್ಕೇ ಸಿಗುತ್ತಿರಲಿಲ್ಲ. ಇದರಿಂದ ನಾನು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೆ. ಹಾಗಾಗಿ ಹೊರಬರಲು ನಿರ್ಧರಿಸಿದೆ ಎಂದು ಸಂತ್ರಸ್ತ ನಟಿ ಹೇಳಿಕೊಂಡಿದ್ದಾರೆ.

ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಉದ್ಯಮಿ ಅರವಿಂದ್‌ ರೆಡ್ಡಿ, ಅವಳಿಗಾಗಿ ʻ3 ಕೋಟಿ ರೂ. ಖರ್ಚು ಮಾಡಿ, ಸೈಟ್, ದುಬಾರಿ ಕಾರು ಕೊಡಿಸಿದ್ದೆ. ಆದರೆ ಅವಳು ಬೇರೆಯವನ ಜೊತೆ ಕಾಣಿಸಿಕೊಳ್ಳುತ್ತಿದ್ದಳುʼ ಅಂತ ಪ್ರತ್ಯಾರೋಪ ಮಾಡಿದ್ರು. ಈ ಸಂಬಂಧ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ನಟಿ, ಇಂಚಿಂಚೂ ಮಾಹಿತಿಯನ್ನ ನೀಡಿದ್ದಾರೆ. ಇದನ್ನೂ ಓದಿ: ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. – ಖರ್ಚು ಮಾಡಿದಷ್ಟೂ ಹಣ ವಾಪಸ್‌ ಕೊಡುವ ತಾಕತ್ತು ಇಲ್ಲ: ಸಂತ್ರಸ್ತ ನಟಿ

ನಟಿ ಹೇಳಿದ್ದೇನು?
ಎರಡೂವರೆ ವರ್ಷಗಳ ಹಿಂದೆ ಪರಿಚಯ ಆಗಿತ್ತು. ಕೆಲ ತಿಂಗಳು ರಿಲೇಷನ್‌ಶಿಪ್‌ನಲ್ಲಿದ್ವಿ, ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಹೋಗ್ತಾ ಹೋಗ್ತಾ ನನ್ನ ಲೈಫ್‌ಸ್ಟೈಲ್‌, ಅವರ ಲೈಫ್‌ಸ್ಟೈಲ್‌ ಆಗಲಿ, ಇಬ್ಬರ ಬಿಹೇವಿಯರ್‌ ಆಗಲಿ ಚೆನ್ನಾಗಿರಲಿಲ್ಲ. ಇದರಿಂದ ನೆಮ್ಮದಿ ಅನ್ನೋದೇ ಇರಲಿಲ್ಲ. ಮಾನಸಿಕವಾಗಿ ತುಂಬಾ ನೊಂದು ಆಚೆ ಬರೋಕೆ ಪ್ರಯತ್ನ ಪಟ್ಟೆ. ಇದನ್ನೂ ಓದಿ: ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು, ಅದಕ್ಕೆ ದೂರಾದೆ – ನಟಿ ಆರೋಪಕ್ಕೆ ಅರವಿಂದ್ ರೆಡ್ಡಿ ಪ್ರತಿಕ್ರಿಯೆ

ಇಬ್ಬರು ನಮ್ಮ ನಮ್ಮ ಮನೆಗಳಲ್ಲೇ ಇರುತ್ತಿದ್ವಿ. ಮೀಟ್‌ ಮಾಡಬೇಕಾದಾಗ ನಾನೇ ಅವರ ಮನೆಗೆ ಹೋಗ್ತಿದೆ. ಅವರು ನಮ್ಮ ಮನೆಗೆ ಬರ್ತಿದ್ದು ತೀರಾ ಅಪರೂಪ. ಏಕೆಂದ್ರೆ ನಾನು ಇದ್ದದ್ದು ಬಾಡಿಗೆ ಮನೆಯಲ್ಲಿ. ಮೊದಲು ಎಲ್ಲ ಚೆನ್ನಾಗಿರ್ತಿತ್ತು, ನಂತರ ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಕಳೆದ ಒಂದು ವರ್ಷದಿಂದ ಟಚ್‌ನಲ್ಲೇ ಇರಲಿಲ್ಲ, ಬರೀ ಜಗಳದಲ್ಲೇ ನಡೆಯುತ್ತಿತ್ತು. ಇದರಿಂದ ನನಗೆ ಮಾನಸಿಕವಾಗಿ ತೊಂದರೆ ಆಗ್ತಿತ್ತು. ಇಬ್ಬರೂ ಚೆನ್ನಾಗಿದ್ದದ್ದು 6 ತಿಂಗಳು ಅಷ್ಟೇ, ಇನ್ನಾರು ತಿಂಗಳು ಆಚೆ ಬರುವ ಮನಸ್ಥಿತಿಯಲ್ಲಿದೆ. ಜೊತೆಯಲ್ಲಿದ್ದು ಸಫರ್‌ ಪಡೋದಕ್ಕಿಂತ ದೂರ ಆಗೋದೇ ಒಳ್ಳೇದು ಅಂತ ನಾನು ಹೊರ ಬರೋದಕ್ಕೆ ಪ್ರಯತ್ನ ಮಾಡ್ತಿದ್ದೆ.

ಕೊನೆ ಕೊನೆಯಲ್ಲಿ ಅವರು ನನ್ನ ಜೊತೆಗೇ ಇರುತ್ತಿರಲಿಲ್ಲ. ಹೇಳದೇ ಕೇಳದೇ ವಿದೇಶಕ್ಕೆ ಹೋಗ್ತಿದ್ರು. ಒಂದೊಂದು ತಿಂಗಳು ಕಾಂಟ್ಯಾಕ್ಟ್‌ನಲ್ಲೇ ಇರುತ್ತಿರಲಿಲ್ಲ. ನಾನು ಬಯಸಿದಾಗ ನನ್ನ ಜೊತೆಗೆ ಇರುತ್ತಿರಲಿಲ್ಲ. ನಾನು ದೂರ ಆಗಬೇಕು ಅನ್ಕೊಂಡಾಗ ದಿಢೀರ್‌ ಅಂತ ಹತ್ತಿರ ಆಗ್ತಿದ್ರು. ನಿನ್ನೊಟ್ಟಿಗೆ ಇರಬೇಕು ಅಂತಿದ್ರು. ಆದ್ರೆ ನನಗೆ ಅದು ಎಮೋಷನಲ್‌ ಆಗಿ ಕನೆಕ್ಟ್‌ ಆಗ್ತಿರಲಿಲ್ಲ. ನಾನು ಹೊರಗೆ ಇದರಿಂದ ಹೊರಬರ್ಬೇಕು ಅಂತ ಹೇಳಿದಾಗ ನಿಮ್ಮ ಅಪ್ಪ ಅಮ್ಮನಿಗೆ ನಿನ್‌ ಬಗ್ಗೆ ಹೇಳಿಬಿಡ್ತೀನಿ. ಸೋಷಿಯಲ್‌ ಮೀಡಿಯಾದಲ್ಲಿ ಹಾಕ್ತೀನಿ ಅಂತ ಹೆದರಿಸೋಕೆ ಶುರು ಮಾಡಿದ್ರು ಅಂತ ಭಾವುಕರಾದ್ರು. ಇದನ್ನೂ ಓದಿ: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಉದ್ಯಮಿ ಅರವಿಂದ್ ರೆಡ್ಡಿಗೆ ಜಾಮೀನು

Share This Article