ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

Public TV
2 Min Read

ಸ್ಯಾಂಡಲ್‌ವುಡ್ (Sandalwood) ನಿರ್ದೇಶಕ ಪವನ್ ಒಡೆಯರ್ (Pavan Wadeyar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಗೆ ಮುದ್ದು ಮಗಳ ಆಗಮನವಾಗಿದೆ. ಈ ಸಂತಸದ ನಡುವೆ ತಮ್ಮ ಬಾಲಿವುಡ್‌ನ ಚೊಚ್ಚಲ ಸಿನಿಮಾ ನಿರ್ದೇಶನದ ಟೈಟಲ್ ರಿವೀಲ್ ಮಾಡಿದ್ದಾರೆ. ಬಾಲಿವುಡ್ ಸಿನಿಮಾದ ಟೈಟಲ್ ಫಿಕ್ಸ್ ಮಾಡಿದ್ದಾರೆ.

ಗೋವಿಂದಾಯ ನಮಃ, ಗೂಗ್ಲಿ (Googly), ರಣವಿಕ್ರಮ, ಜೆಸ್ಸಿ, ನಟಸಾರ್ವಭೌಮ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ದೇಶಿಸಿರುವ ಪವನ್ ಒಡೆಯರ್ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ವಿಭಿನ್ನ ಕಥೆಯನ್ನ ರೆಡಿ ಮಾಡಿ, ಹಿಂದಿಯಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ. ಹಿಂದಿ ಸಿನಿಮಾಗೆ ‘ಆವಸ್ಥಿ ವರ್ಸಸ್ ಆವಸ್ಥಿ’ ಎಂಬ ಟೈಟಲ್ ಇಡಲಾಗಿದೆ. ಚಿತ್ರೀಕರಣ ಮುಗಿಸಿ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.

ಸುಳ್ಳು ತುಂಬಿರುವ ಜಗತ್ತಿನಲ್ಲಿ ಅವನೊಬ್ಬನೇ ಸತ್ಯ ನುಡಿಯುವವನು ಎಂದು ನಂಬಿರುವ ನಾಯಕನ ಕುರಿತ ಸ್ಟೋರಿಯನ್ನ ನಿರ್ದೇಶಕ ಪವನ್ ಒಡೆಯರ್ ಹೇಳಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಬೆಂಗಾಳಿ, ಬಾಲಿವುಡ್ ಚಿತ್ರಗಳಲ್ಲಿ ಮಿಂಚಿರುವ ಪರಂಬ್ರತಾ ಚಟರ್ಜಿ ನಾಯಕನಾಗಿದ್ದಾರೆ. ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಟಿ ಗೀತಾ ಬಸ್ರಾ ಅವರಿಗೆ ನಾಯಕಿಯಾಗಿದ್ದು, ಏಳು ವರ್ಷಗಳ ಬ್ರೇಕ್ ಬಳಿಕ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಜೊತೆಗೆ ಮನೋಜ್ ಜೋಶಿ, ದಲೀಪ್ ತಾಹಿಲ್, ಜರೀನಾ ವಾಹಬ್, ಸತೀಶ್ ರಾಜೇಂದ್ರನ್, ಸಹರ್ ಶುಕ್ಲಾ, ಶಿವ್ ಪಂಡಿತ್, ಶಿಶಿರ್ ಶರ್ಮಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

ಪವನ್ ಒಡೆಯರ್ ಈ ಹಿಂದೆ ನಿರ್ದೇಶಿಸಿದ ಕನ್ನಡದ ಸಿನಿಮಾಗಳು ಪರಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದ ಸಂದರ್ಭದಲ್ಲಿಯೇ ಹೊಸ ಕಥೆಯನ್ನ ಹೇಳಬೇಕು ಎಂಬ ಆಸೆ ಪವನ್ ಅವರಿಗೆ ಇತ್ತತಂತೆ. ಅದರಂತೆ ಈಗ ಡಿಫರೆಂಟ್ ಕಥೆಯೊಂದಿಗೆ ಬಾಲಿವುಡ್‌ಗೆ ಪವನ್ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

ಮನೆಗೆ ಮುದ್ದು ಮಗಳು ಆಗಮನವಾಗಿರುವ ಖುಷಿಯಲ್ಲಿ ನಿರ್ದೇಶಕ ಪವನ್ ಒಡೆಯರ್ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯದಲ್ಲೇ ಬಾಲಿವುಡ್ ಸಿನಿಮಾ ತೆರೆಗೆ ಅಪ್ಪಳಿಸೋದಾಗಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್