ಮುಟ್ಟಾದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ತಿಥಿ ಕಥೆಗಾರ ಈರೇಗೌಡ!

Public TV
3 Min Read

-ಧರ್ಮಶಾಲಾ ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ನಿಂದ ‘ಬಳೆಕೆಂಪ’ ಹೊರಕ್ಕೆ

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಆರೋಪದ ಬೆನ್ನಲ್ಲೇ ತಿಥಿ ಸಿನಿಮಾದ ಕಥೆಗಾರ ಈರೇಗೌಡ ಮೀಟೂ ಸುಳಿಗೆ ಸಿಲುಕಿದ್ದಾರೆ. ಯುವತಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದರಿಂದ ಈರೇಗೌಡ ಅವರು ಉತ್ತಮ ವೇದಿಕೆಯನ್ನೇ ಕಳೆದುಕೊಂಡಿದ್ದಾರೆ.

ಹೌದು, ಏಕತಾ.ಎಂ ಎಂಬ ಯುವತಿ ತನ್ನ ಫೇಸ್‍ಬುಕ್ ಖಾತೆಯಲ್ಲಿ ವಿವರವಾಗಿ ತನ್ನ ಮೇಲೆ ಈರೇಗೌಡ ಎಸಗಿದ ಲೈಂಗಿಕ ಕಿರುಕುಳವನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಈರೇಗೌಡ ಅವರ ನಿರ್ದೇಶನದ ‘ಬಳೆಕೆಂಪ’ ಸಿನಿಮಾವನ್ನು ಧರ್ಮಶಾಲಾ ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ನಿಂದ ಕೈ ಬಿಡಲಾಗಿದೆ.

ಯುವತಿ ಆರೋಪ ಏನು?:
ಪ್ರೀಯ ಸ್ನೇಹಿತರೆ ದುಃಖದ ಹಾಗೂ ನನ್ನನ್ನು ತುಂಬಾ ಕಾಡಿದ ಸಂಗತಿಯೊಂದನ್ನು ಹೇಳುತ್ತಿದ್ದೇನೆ. ನೈತಿಕತೆಯ ಕುರಿತಾಗಿ ಮಾತನಾಡುವ ಕೆಲವರು ಸ್ನೇಹ, ಕೆಲಸ, ಸಿನಿಮಾ ಮತ್ತು ಕಲೆಯಲ್ಲಿ ಹೆಸರಿನಲ್ಲಿ ಹೇಯ ಕೃತ್ಯ ಎಸಗುತ್ತಿದ್ದಾರೆ. ಇಂತದ್ದೇ ಪರಿಸ್ಥಿತಿಯನ್ನು ನಾನು ಅನುಭವಿಸಿರುವೆ. ಆ ವ್ಯಕ್ತಿ ಹಾಗೇ ವರ್ತಿಸಿದ್ದಕ್ಕೆ ನನಗೆ ಒಂದು ಕ್ಷಣ ಶಾಕ್ ಆಗಿತ್ತು. ಸಿನಿಮಾ ಕ್ಷೇತ್ರವನ್ನೇ ಅವಲಂಬಿಸಿ ಬದುಕುವವರೇ ಇಂತರ ಕೃತ್ಯ ಎಸಗಿದರೆ ಹೇಗೆ. ಒಪ್ಪಿಗೆ ಇಲ್ಲದೆ ನಿಮ್ಮ ದೇಹವನ್ನು ಮುಟ್ಟಲು ಯಾವುದೇ ಕಿರಿಯ ಹಾಗೂ ಹಿರಿಯ ವ್ಯಕ್ತಿಗೆ ಇಲ್ಲ. ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಲಿಂಗಸಮಾನತೆ ಆಧಾರಿತ ಸಿನಿಮಾ ಮೂಲಕ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಅರ್ಹರಲ್ಲ. ಈ ಸಂದೇಶವನ್ನು ಎಲ್ಲರಿಗೂ ಶೇರ್ ಮಾಡಿ ಅಂತಾ ಯುವತಿ ಕೇಳಿಕೊಂಡಿದ್ದಾಳೆ.

#ಮೀ ಟೂ ಮೂಲಕ ಪ್ರಾರಂಭಿಸಿ ಯುವತಿ ತನಗಾದ ಅನ್ಯಾದ ಕುರಿತು ವಿವರಿಸಿದ್ದಾರೆ.

https://www.facebook.com/inmyname/posts/10156856696292990

ಸಿನಿಮಾ ಲೋಕದ ಗೀಳು ನನ್ನಲ್ಲಿ ಹೆಚ್ಚಾಗಿತ್ತು. ನನಗೆ ಸಮಕಾಲಿನ ಸಿನಿಮಾ ನಿರ್ದೇಶಕರು, ಕಥೆಗಾರರ ಜೊತೆಗೆ ಕೆಲಸ ಮಾಡುವ ಹಂಬಲವಿತ್ತು. ಆಗ ತಿಥಿ ಸಿನಿಮಾ ತೆರೆಕಂಡಿತ್ತು. ಅದನ್ನು ನೋಡಿದ ನನಗೆ ತುಂಬಾ ಇಷ್ಟವಾಯಿತು. ಚಿತ್ರರಂಗದಲ್ಲಿ ಬೆಳೆಯಲು ನನಗೆ ಒಬ್ಬ ಮೆಂಟರ್ ಬೇಕಿತ್ತು. ಹೀಗಾಗಿ ತಿಥಿ ಸಿನಿಮಾದ ಸ್ಕ್ರೀನ್ ರೈಟರ್ ಈರೇಗೌಡ ಅವರನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿದೆ. ಬಳಿಕ ಅವರ ನಂಬರ್ ಪಡೆದಿದ್ದೆ, ಆದರೆ ಅವರು ನನಗೆ ತುಂಬಾ ಹತ್ತಿರವಾಗಿದ್ದು, ಬೆಂಗಳೂರಿನಲ್ಲಿ ಭೇಟಿಯಾದ ಮೇಲೆ.

ಸ್ಯಾಂಕಿಟಾಂಕಿಯಲ್ಲಿ ಮೊದಲ ಭೇಟಿ ಮಾಡಿದಾಗ ತಿಥಿ ಸಿನಿಮಾ ಪಾತ್ರಗಳ ಆಯ್ಕೆ, ಕಥೆಯ ಕುರಿತಾಗಿ ಹೆಚ್ಚುಕಾಲ ಚರ್ಚೆ ಮಾಡಿದೆವು. ಇಂತಹ ಆತ್ಮೀಯ ವ್ಯಕ್ತಿ ಸಿಕ್ಕಿದ್ದಕ್ಕೆ ನನ್ನೊಳಗೆ ನಾನು ತುಂಬಾ ಖುಷಿಪಟ್ಟೆ. ಹೀಗೆ ಎರಡು-ಮೂರು ಬಾರಿ ಸ್ಯಾಂಕಿನಲ್ಲಿ ಭೇಟಿ ಮಾಡಿದ್ದೆ. ಈರೇಗೌಡ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು, ತನ್ನ ಸುತ್ತುವರಿದ ಹಳ್ಳಿಯ ಕಥೆಗಳನ್ನು ಹೇಳುತ್ತಿದ್ದ. ಹೀಗೆ ನಮ್ಮಿಬ್ಬರ ಭೇಟಿ ಸಾಮಾನ್ಯವಾಗಿ ಸ್ಯಾಂಕಿ ಬಳಿ ಆಗುತ್ತಿತ್ತು. ಕಳೆದ ಬಾರಿಯಂತೆ ಒಂದು ದಿನ ಸ್ಯಾಂಕಿಟ್ಯಾಕಿ ಬಳಿ ಕುಳಿತಾಗ, ಲೈಗಿಂಕವಾಗಿ ನಿನ್ನಿಂದ ಆಕರ್ಷಿತನಾಗಿದ್ದೇನೆ ಅಂತಾ ಪ್ರಪ್ರೋಸ್ ಮಾಡಿದರು. ಆಗ ನಾನು ಅದನ್ನು ನಿರಾಕರಿಸಿದೆ. ನನ್ನೊಳಗೆ ನಾನು ಈ ಕುರಿತು ಪ್ರಶ್ನಿಸಿಕೊಂಡೆ. ಈ ಕುರಿತು ಕೆಲ ಆತ್ಮೀಯ ಸ್ನೇಹಿತರ ಬಳಿ ಹೇಳಿಕೊಂಡೆ. ಆದರೆ ಈರೇಗೌಡ ಅವರ ಜೊತೆ ಮಾತನಾಡುವುದನ್ನು ಬಿಟ್ಟಿರಲಿಲ್ಲ.

ಒಂದು ಬಾರಿ ‘ಬಳೆಕೆಂಪ’ ಸಿನಿಮಾದ ಕುರಿತಾಗಿ ಚರ್ಚೆ ಮಾಡಿ, ಆ ಹಳ್ಳಿಗೆ ಹೋಗಿ ಬರೋಣ ನಂಗೆ ಸ್ವಲ್ಪ ಕೆಲಸ ಇದೆ ಅಂದಿದ್ದರು. ನಾನು ಅವರನ್ನು ನಂಬಿ ಜೊತೆಗೆ ಹೋದೆ. ಅವತ್ತು ಅವರ ಸ್ನೇಹಿತರ ಮನೆಗೆ ಹೋಗಿದ್ದೆವು. ಅಲ್ಲಿಯೇ ಕಾಫಿ ಕುಡಿದೆ. ನಮ್ಮ ಜೊತೆಗೆ ಈರೇಗೌಡ ಅವರ ಸ್ನೇಹಿತ ಕೂಡ ಇದ್ದ. ಸುತ್ತಾಟದಿಂದಾಗಿ ನನಗೆ ತುಂಬಾ ಸುಸ್ತಾಗಿದ್ದರಿಂದ ಮಲಗಿಕೊಂಡೆ. ಆದರೆ ಅಷ್ಟರಲ್ಲಿ ಈರೇಗೌಡ ನನ್ನ ಬಳಿ ಬಂದು, ಅಸಭ್ಯವಾಗಿ ನಡೆದುಕೊಳ್ಳಲು ಶುರು ಮಾಡಿದರು. ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದರು. ನನಗೆ ಅಂದು ಮುಟ್ಟಾಗಿತ್ತು. ಅದನ್ನು ಅವರಿಗೆ ಹೇಳಿದರೂ ಕೇಳದೆ ಕೆಟ್ಟದಾಗಿ ಬಳಸಿಕೊಂಡರು. ನನ್ನ ವಿರೋಧವೂ ವ್ಯರ್ಥವಾಯಿತು.

ತದನಂತರ ಇದರಲ್ಲಿ ಏನು ತಪ್ಪು ಅಂತಾ ಪ್ರಶ್ನೆ ಬೇರೆ ಮಾಡಿದರು. ನಾನು ಊಬರ್ ಬುಕ್ ಮಾಡಿ ಅಲ್ಲಿಂದ ರೂಮ್‍ಗೆ ತೆರಳಿದೆ. ಬದುಕು ಮುಗಿಯಿತು ಅನ್ನುವಷ್ಟರ ಮಟ್ಟಿಗೆ ಕೆಟ್ಟ ಅನುಭವವಾಗಿತ್ತು. ರೂಮ್‍ಗೆ ಬಂದು ಒಬ್ಬಳೇ ಅತ್ತುಬಿಟ್ಟೆ. ಈ ಘಟನೆ ಕೆಲದಿನಗಳ ಬಳಿಕ ಈರೇಗೌಡ ಮತ್ತೆ ನನ್ನ ಸಂಪರ್ಕಿಸಲು ಯತ್ನಿಸಿ ಕ್ಷಮೆಯಾಚನೆಗೆ ಶುರುಮಾಡಿದರು. ನಾನು ಅನೇಕ ಬಾರಿ ಆತನ ಹೆಸರು, ಘಟನೆ ಬಗ್ಗೆ ಹೇಳಿಕೊಳ್ಳಬೇಕು ಅಂತಾ ಅನಿಸಿದ್ದರೂ ಹೇಳಿಕೊಳ್ಳಲಿಲ್ಲ. ಈಗ ಮೀ ಟೂ ಅಭಿಯಾನದ ಮೂಲಕ ಹೇಳಿಕೊಳ್ಳುತ್ತೀದ್ದೇನೆ ಅಂತಾ ಸಂತ್ರಸ್ತ ಯುವತಿ ಹೇಳಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *