ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

Public TV
2 Min Read

ನ್ನಡದ ಹೌಸ್‌ಫುಲ್ (Housefull), ಅಂತರಾತ್ಮ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ವಿಶಾಖ ಸಿಂಗ್ (Vishakha Singh) ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯದಿಂದ ತಾವು ಬಳಲುತ್ತಿರುವ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್‌ಗೆ ತಿಳಿಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ಸದ್ದು ಮಾಡುತ್ತಿದೆ.

ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ವಿಶಾಖ, ದಿಗಂತ್ (Actor Diganth) ಜೊತೆ ‘ಹೌಸ್‌ಫುಲ್’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಬಹುಭಾಷಾ ನಟಿಸಿದ್ದರು. ನಟಿಗೆ ಹೇಳಿಕೊಳ್ಳುವಂತಹ ಬ್ರೇಕ್ ಎಲ್ಲೂ ಸಿಗಲಿಲ್ಲ. ಇದೀಗ ತಮ್ಮ ಅನಾರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೊಗಳನ್ನು ಹಂಚಿಕೊಂಡಿರುವ ವಿಶಾಖ ಸಿಂಗ್, ನಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಈ ರೀತಿ ಬಹಳ ದಿನ ಒಂದೆಡೆ ಇರಲ್ಲ. ಚಳಿಗಾಲದಲ್ಲಿ ವಿಚಿತ್ರ ಘಟನೆಗಳು, ಭಯಂಕರವಾದ ಅವಘಡಗಳು ಜೊತೆಗೆ ಆರೋಗ್ಯ ಸಮಸ್ಯೆಗಳು ಭಾದಿಸುತ್ತಿವೆ. ಸಮ್ಮರ್‌ನಲ್ಲಿ ಮತ್ತೆ ಚೇತರಿಸಿಕೊಳ್ಳುತ್ತೇನೆ. ಅದೇನೊ ಗೊತ್ತಿಲ್ಲ ಪ್ರತಿ ಏಪ್ರಿಲ್ ನನಗೆ ಹೊಸ ವರ್ಷದಂತೆ ಕಾಣಿಸುತ್ತದೆ. ಬಹಶಃ ಅದು ಹೊಸ ಆರ್ಥಿಕ ವರ್ಷ ಆಗಿರುವುದಕ್ಕೋ ಅಥವಾ ನಾನು ಹುಟ್ಟಿದ ತಿಂಗಳು ಆಗಿರುವುದಕ್ಕೋ ಇರಬಹುದು. ಎಷ್ಟೇ ಸಮಸ್ಯೆಗಳು ಬಂದರೂ ದೃಢಸಂಕಲ್ಪದೊಂದಿಗೆ ಮುಂದೆ ಸಾಗುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ವಿಧಿವಶ

ಸದ್ಯ ನಟಿಯ ಪರಿಸ್ಥಿತಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕೆ ತಮ್ಮ ಆರೋಗ್ಯದ ಬಗ್ಗೆ ಕ್ಲಾರಿಟಿ ನೀಡದೇ ಇರುವುದು ಕೂಡ ಬೇಸರ ತಂದಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ, ಆಕೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ 2 ವರ್ಷಗಳ ಹಿಂದೆ ಸೆಟ್ಟೇರಿದ್ದ ಬಾಲಿವುಡ್‌ನ ‘ದಿ ಮಾಯ ಟೇಪ್’ ಮತ್ತು ತೆಲುಗಿನ ‘ತುರಂ’ ಸಿನಿಮಾಗಳ ಕೆಲಸಗಳು ನಡೀತಿದೆ.

Share This Article