Pushpa 2: ಅಲ್ಲು ಅರ್ಜುನ್‌ ಜೊತೆ ಶ್ರೀಲೀಲಾ ಡ್ಯಾನ್ಸ್?‌

By
1 Min Read

ಬೆಂಗಳೂರಿನ ಬೆಡಗಿ ಶ್ರೀಲೀಲಾಗೆ (Sreeleela) ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಿನಿಮಾಗಳಲ್ಲಿ ಬ್ರೇಕ್ ಸಿಗದೇ ಇದ್ದರೂ ಅವರ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಆ್ಯಕ್ಟಿಂಗ್‌ನಲ್ಲೂ ಸೈ, ಡ್ಯಾನ್ಸ್‌ಗೂ ಜೈ ಅನ್ನೋ ಶ್ರೀಲೀಲಾ ಇದೀಗ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಹೆಜ್ಜೆ ಹಾಕಲು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಅಲ್ಲು ಅರ್ಜುನ್‌ ಜೊತೆ ಶ್ರೀಲೀಲಾ ಡ್ಯಾನ್ಸ್‌ ಮಾಡಲಿದ್ದಾರೆ ಎನ್ನಲಾದ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಇತ್ತೀಚೆಗೆ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ತೃಪ್ತಿ ದಿಮ್ರಿ, ಶ್ರದ್ಧಾ ಕಪೂರ್ (Shraddha Kapoor) ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು. ಆದರೆ ಕನ್ನಡದ ನಟಿ ಶ್ರೀಲೀಲಾಗೆ ‘ಪುಷ್ಪ 2’ ಟೀಮ್ ಮಣೆ ಹಾಕಿದೆಯಂತೆ. ಶ್ರೀಲೀಲಾ ಡ್ಯಾನ್ಸ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್‌ಗೆ ಕ್ರೇಜ್ ಇದೆ. ಹಾಗಾಗಿ ಈ ನಟಿಯನ್ನೇ ಚಿತ್ರತಂಡ ಹೆಜ್ಜೆ ಹಾಕಲು ಕೇಳಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ: ನಿರ್ದೇಶಕ ಸಾಯಿ ಪ್ರಕಾಶ್

ಇದೇ ನವೆಂಬರ್ 6 ಮತ್ತು 7ರಂದು ‘ಪುಷ್ಪ 2’ ಸಿನಿಮಾದ ಸ್ಪೆಷಲ್ ಹಾಡಿನ ಶೂಟಿಂಗ್ ಕೂಡ ನಡೆಯಲಿದೆ ಎನ್ನಲಾಗಿದೆ. ಡಿ.5ರಂದು ಅಲ್ಲು ಅರ್ಜುನ್‌, ರಶ್ಮಿಕಾ ನಟನೆಯ ಈ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹಾಗಾಗಿ ಒಂದು ತಿಂಗಳ ಮುಂಚೆ ಐಟಂ ಸಾಂಗ್ ಶೂಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಶ್ರೀಲೀಲಾ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಅದೆಷ್ಟು ನಿಜ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.

ಅಂದಹಾಗೆ, ಶ್ರೀಲೀಲಾ ಅವರು ಕನ್ನಡದ ಜ್ಯೂನಿಯರ್, ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿವೆ. ಬಾಲಿವುಡ್‌ಗೆ ಎಂಟ್ರಿ ಕೊಡಲು ನಟಿ ತಯಾರಿ ಮಾಡಿಕೊಳ್ತಿದ್ದಾರೆ.

Share This Article