‘ಅನಿಮಲ್’ ನಿರ್ದೇಶಕ ಸಂದೀಪ್‌ರನ್ನು ಹಾಡಿ ಹೊಗಳಿದ ರಶ್ಮಿಕಾ ಮಂದಣ್ಣ

Public TV
1 Min Read

ಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಅವರ ಸಿನಿಮಾ ಮೇಲಿನ ಪ್ರೀತಿಗೆ ರಶ್ಮಿಕಾ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಮತ್ತೊಂದು ದಾಖಲೆ ಬರೆದ ಕಾಟೇರ: 200 ಕೋಟಿ ರೂ. ಕ್ಲಬ್ ಸೇರಿದ ಸಂಭ್ರಮ

ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ಕಾರಣವಾದ ‘ಅನಿಮಲ್’ ಸಿನಿಮಾ ಮತ್ತು ಡೈರೆಕ್ಟರ್ ಕುರಿತು ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ. ಸಂದೀಪ್ ಅವರು (Sandeep Reddy Vanga) ಸಿನಿಮಾ ಮಾಡುವಾಗ ಭಿನ್ನವಾಗಿ ಯೋಚಿಸುತ್ತಾರೆ. ಆದರೆ ‘ಅನಿಮಲ್’ ಚಿತ್ರ ನೋಡಿದಾಗ ಈ ರೀತಿಯ ಸಿನಿಮಾ ಬೇಕು ಎನ್ನುವಂತೆ ಮಾಡಿದ್ದರು.

ಈ ವೇಳೆ, ಅನಿಮಲ್ ಪಾರ್ಟ್ 2 ಬಗ್ಗೆ ನಟಿ ಮಾತನಾಡಿದ್ದರು. ‘ಅನಿಮಲ್ ಪಾರ್ಕ್’ ಚಿತ್ರದ ಕಥೆ ಹೇಗೆ ಬೇಕಾದರೂ ಇರಬಹುದು. ಈಗಾಗಲೇ ಚಿತ್ರದ ಸಣ್ಣ ಎಳೆಯನ್ನು ಸಂದೀಪ್ ಹೇಳಿದ್ದಾರೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ‘ಅನಿಮಲ್’ ಪಾರ್ಟ್ 2 ಸಕ್ಸಸ್‌ ಕಾಣುವ ಭರವಸೆಯಲ್ಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ, ಒಂದು ಕಥೆ ರೆಡಿ ಮಾಡಿದ್ರೆ ಅದಕ್ಕೆ ಕರೆಕ್ಟ್ ಆಗಿ ನಿಲ್ಲುತ್ತಾರೆ. ಜನಕ್ಕೆ ಹೇಗೆ ಬೇಕೋ ಕಥೆ ಬದಲಾಯಿಸುವುದಿಲ್ಲ ಎಂದು ರಶ್ಮಿಕಾ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಕೊನೆಗೂ ನಿಕ್ಕಿ ಆಯಿತು ಗುರು-ಜಗ್ಗೇಶ್ ಚಿತ್ರದ ರಿಲೀಸ್ ಡೇಟ್

‘ಅನಿಮಲ್ ಪಾರ್ಕ್’, ಪುಷ್ಪ 2, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

Share This Article