ಬಲವಂತವಾಗಿ ಕೈ ಹಿಡಿದು ಎಳೆದ ಅಭಿಮಾನಿಗೆ ರಾಗಿಣಿ ಕಪಾಳಮೋಕ್ಷ

Public TV
1 Min Read

ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ (Ragini Dwivedi) ಜೊತೆ ಅಭಿಮಾನಿಯೋರ್ವ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಬಲವಂತವಾಗಿ ಕೈ ಹಿಡಿದು ಎಳೆದ ಅಭಿಮಾನಿಗೆ (Fan) ರಾಗಿಣಿ ಕಪಾಳಮೋಕ್ಷ (Slap) ಮಾಡಿದ್ದಾರೆ. ಇದನ್ನೂ ಓದಿ:ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

ಅಭಿಮಾನ ಅನ್ನೋ ಹೆಸರಲ್ಲಿ ಕೆಲ ನಟ ನಟಿಯರ ಜೊತೆ ಕೆಲವರು ಅಸಭ್ಯವಾಗಿ ವರ್ತಿಸುತ್ತಾರೆ. ಅಂತಹದ್ದೇ ಘಟನೆ ರಾಗಿಣಿ ಎದುರಿಸಿದ್ದಾರೆ. ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ರಾಗಿಣಿಯ ಕೈ ಹಿಡಿದು ಎಳೆದಿದ್ದಾರೆ. ಕೂಡಲೇ ನಟಿ ರಾಂಗ್ ಆಗಿದ್ದಾರೆ. ಕೈ ಹಿಡಿದು ಎಳೆದ ಆ ವ್ಯಕ್ತಿಗೆ ರಪ್ ಅಂತ ಕೆನ್ನೆಗೆ ಬಾರಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕ್ಷಣ ಘಟನೆ ನೋಡಿ ಸೇರಿದ್ದ ಜನ ಶಾಕ್ ಆಗಿದ್ದಾರೆ. ಆ ಕೂಡಲೇ ಆ ವ್ಯಕ್ತಿಯನ್ನು ಹೊರ ದಬ್ಬಲಾಗಿದೆ.

ಇತ್ತೀಚೆಗೆ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ. ರಾಗಿಣಿಯ ನಡೆಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸರಿಯಾಗಿ ಮಾಡಿದ್ದೀರಿ ನೀವು ಅಂತ ನಟಿಯ ಪರ ನಿಂತಿದ್ದಾರೆ ಫ್ಯಾನ್ಸ್.

Share This Article