ಸರೋಜಕ್ಕ ಸಾಕ್ಷಾತ್ ಅನ್ನಪೂರ್ಣೇಶ್ವರಿ ಆಗಿದ್ದರು: ನಟ ಸುದೀಪ್ ತಾಯಿ ನಿಧನಕ್ಕೆ ಬೊಮ್ಮಾಯಿ ಸಂತಾಪ

Public TV
1 Min Read

ಬೆಂಗಳೂರು: ಖ್ಯಾತ ನಟ ಸುದೀಪ್ (Sudeep) ಅವರ ತಾಯಿ, ಹಾಗೂ ನನ್ನ ಆತ್ಮೀಯ ಸ್ನೇಹಿತ ಸಂಜೀವ್ ಸರೋವರ ಅವರ ಪತ್ನಿ ಸರೋಜಕ್ಕ ನಿಧನ ಹೊಂದಿರುವುದು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಅತ್ಯಂತ ದುಃಖ ತಂದಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಸರೋಜಕ್ಕ ತಾಯಿ ಮಮತೆಯ ಸ್ವರೂಪಿಣಿ ಆಗಿದ್ದರು. ಮನೆಗೆ ಬರುವರಿಗೆಲ್ಲ ಆದರತೆ ತೋರುತ್ತಿದ್ದರು. ಅವರು ಸಾಕ್ಷಾತ್ ಅನ್ನಪೂರ್ಣೆಶ್ವರಿಯೇ ಆಗಿದ್ದರು. ಹಲವು ವರ್ಷಗಳ ಕಾಲ ಅವರು ಮನೆಗೆ ಹೋದಾಗೆಲ್ಲ ಊಟ, ಉಪಚಾರ ಮಾಡಿ ಪ್ರೀತಿಯಿಂದ ಮಾತನಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸರೋಜ ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ನೋವು ತಂದಿದೆ. ಈಗ ನಾನು ಅವರ ಮನೆಗೆ ಹೋಗಿ, ಅಂತಿಮ ದರ್ಶನ ಪಡೆಯುತ್ತೇನೆ. ಸುದೀಪ್ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Share This Article