ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು: ಶ್ರೀಮುರಳಿ

Public TV
1 Min Read

ಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ (Pahalgam Terrorist Attack) ಬಗ್ಗೆ ನಟ ಶ್ರೀಮುರಳಿ (Srimurali) ಕೆಂಡಕಾರಿದ್ದಾರೆ. ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು ಎಂದು ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಕಿಸ್’ ನಟಿಗೆ ಅದೃಷ್ಟ- ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಜೋಡಿ?

ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ನೋವಾಗ್ತಿದೆ. ಇದನ್ನೆಲ್ಲಾ ಯಾರು ಮಾಡಿದ್ದಾರೋ ಅವರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು. ಅಲ್ಲಿ ಸಮಾಧಾನವಿಲ್ಲ. ಈ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಒಬ್ಬ ನಾಗರೀಕನಾಗಿ ಹೇಳಬೇಕು ಅಂದರೆ ಉಗ್ರರ ದಾಳಿ ವಿಷ್ಯ ಕೇಳಿ ಮೈಯಲ್ಲಿ ರಕ್ತ ಕುದಿಯುತ್ತಿದೆ. ಅವರ ಸಂಹಾರ ಆಗೋವರೆಗೂ ನಮಗೆ ನೆಮ್ಮದಿಯಿಲ್ಲ. ಅಮಯರ ಜೀವ ತೆಗೆದಿದ್ದಾರೆ. ಅದಕ್ಕೆ ಉಗ್ರರ ಅಂತ್ಯ ಆಗಲೇಬೇಕು ಎಂದು ಶ್ರೀಮುರಳಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್

ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.

Share This Article