ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದು ಶವವನ್ನು ಮೋರಿಗೆ ಎಸೆದಿದ್ದ ದರ್ಶನ್‌ ಟೀಂ

By
2 Min Read

ಬೆಂಗಳೂರು: ಚಿತ್ರದುರ್ಗದಿಂದಲೇ (Chitradurga) ರೇಣುಕಾಸ್ವಾಮಿಯನ್ನು (Renuka Swamy) ಅಪಹರಣ (Kidnap) ಮಾಡಿ ಬೆಂಗಳೂರಿಗೆ ಕರೆ ತಂದು ದರ್ಶನ್‌ ಟೀಂ (Darshan Team) ಕೊಲೆ ಮಾಡಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಶನಿವಾರ ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ಕರೆ ತಂದು 24 ಗಂಟೆ ನಿರಂತರ ಚಿತ್ರ ಹಿಂಸೆ ನೀಡಿದ್ದಾರೆ. ತನ್ನ ಸ್ನೇಹಿತ ಉದ್ಯಮಿ, ವಿನಯ್‌ಗೆ ಸೇರಿದ ಆರ್‌ಆರ್‌ ನಗರದದ ಪಟ್ಟಣಗೆರೆ ಗೋಡೌನ್‌ಗೆ ರೇಣುಕಾಸ್ವಾಮಿಯನ್ನು ಕರೆ ತಂದು ಅಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

ಯಾವ ರೀತಿ ಹಲ್ಲೆ ಮಾಡಿದ್ದಾರೆ ಅಂದರೆ ರೇಣುಕಾಸ್ವಾಮಿಯ ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದು ಸುಮ್ಮನಹಳ್ಳಿ ಬಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿರುವ ರಾಜಕಾಲುವೆಗೆ ಎಸೆದಿದ್ದರು.

 

ಆಟೋದಲ್ಲಿ ಶವ ರವಾನೆ:
ಆರ್ ಆರ್ ನಗರದ ವಿನಯ್ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಕೊಲೆ ಮಾಡಿದ್ದಾರೆ. ಕೊಲೆ ನಂತರ ಆಟೋ ಹಾಗೂ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹ ರವಾನೆ ಮಾಡಿದ್ದಾರೆ. ಬಡ್ಡಿ ಕಟ್ಟಲು ಸಾಧ್ಯವಾಗದಕ್ಕೆ ವಿನಯ್‌ ಅಟೋವನ್ನು ವಶಕ್ಕೆ ಪಡೆದಿದ್ದ. ಈ ಆಟೋದಲ್ಲಿ ಶವವನ್ನು ರವಾನಿ ಮಾಡಿ ರಾಜಕಾಲುವೆ ಎಸೆದಿದ್ದಾರೆ.

ಹತ್ಯೆಯಾದ ರೇಣುಕಾಸ್ವಾಮಿ
ಹತ್ಯೆಯಾದ ರೇಣುಕಾಸ್ವಾಮಿ

ಕಿಡ್ನಾಪ್‌ ಮಾಡಿದ್ದು ಹೇಗೆ?
ಪವಿತ್ರಾ ಗೌಡಗೆ (Pavithra Gowda) ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್‌ ಖಾತೆಯನ್ನು ದರ್ಶನ್‌ ತಂಡ ತೆರೆದಿತ್ತು. ಈ ಖಾತೆಯ ಮೂಲಕ ರೇಣುಕಾಸ್ವಾಮಿಯ ಜೊತೆ ಸಂವಹನ ಮಾಡಲಾಗುತ್ತಿತ್ತು.

ಶನಿವಾರ ಮಾತನಾಡಲು ಮನೆಯಿಂದ ಹೊರಗಡೆ ಬಾ ಎಂದು ಖಾತೆಯಿಂದ ಮಸೇಜ್‌ ಕಳುಹಿಸಲಾಗಿತ್ತು. ಈ ಮಸೇಜ್‌ಗೆ ಒಪ್ಪಿ ಆತನ ಮನೆಯಿಂದ ಹೊರಗೆ ಬಂದಿದ್ದ. ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾ ಅಧ್ಯಕ್ಷ ರಘು ದರ್ಶನ್‌ ನೇತೃತ್ವದಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆ ತರಲಾಗಿತ್ತು.

ಹಲ್ಲೆ ನಡೆಸುವ ಸಂದರ್ಭದಲ್ಲಿ ದರ್ಶನ್‌ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು. ದರ್ಶನ್‌ ಹೊಡೆದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಉಳಿದ ಆರೋಪಿಗಳು ತಪ್ಪೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈಗ ಮೈಸೂರಿನಲ್ಲಿದ್ದ ದರ್ಶನ್‌ ಅವರನ್ನು ಬಂಧಿಸಿ ಕರೆ ತಂದಿದ್ದಾರೆ.

Share This Article