ನಟ ಚೇತನ್‌ ಭಾರತದ ವೀಸಾ ರದ್ದು

Public TV
1 Min Read

ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದ ಚೇತನ್‌ (Chethan) ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು (OCI) ಕೇಂದ್ರ ಗೃಹ ಇಲಾಖೆ ರದ್ದುಗೊಳಿಸಿದೆ. ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ (FRRO) ಪತ್ರವನ್ನು ಚೇತನ್ ಅವರು ಏಪ್ರಿಲ್ 14 ರಂದು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್


ಸ್ವೀಕರಿಸಿದ 15 ದಿನಗಳಲ್ಲಿ ಒಸಿಐ ಕಾರ್ಡ್‌ ಅನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಮಾರ್ಚ್ 21 ರಂದು ಅವರನ್ನು ಬಂಧಿಸಿದ್ದರು.


ನಟ ಚೇತನ್‌ ಅವರ ಪೋಷಕರು ಮೂಲತ: ಭಾರತೀಯರಾಗಿದ್ದರೂ ಚೇತನ್‌ ಅಮೆರಿಕದಲ್ಲಿ ಜನಿಸಿದ ಅವರು ಅಮೆರಿಕದ ಪೌರತ್ವ ಹೊಂದಿದ್ದಾರೆ. ಸಾಗರೋತ್ತರ ವೀಸಾದ ಅಡಿ ಭಾರತದಲ್ಲಿ ವಾಸವಾಗಿದ್ದರು.

Share This Article