ವಿದೇಶಿ ಮಿಸ್ಟರಿ ಮ್ಯಾನ್ ಜೊತೆ ಪ್ರೀತಿಯಲ್ಲಿ ಬಿದ್ರಾ ಕಂಗನಾ?

Public TV
1 Min Read

ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಅವರು ಇದೀಗ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ವಿದೇಶಿ ಹುಡುಗನ ಜೊತೆ ಮುಂಬೈನಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕಂಗನಾ ಹೆಚ್ಚೆಚ್ಚು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರ ಕೆರಿಯರ್‌ಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗುತ್ತಿಲ್ಲ. ಇದರ ನಡುವೆ ನಟಿ ಡೇಟಿಂಗ್ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಕಂಗನಾ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ವಿದೇಶಿ ಮಿಸ್ಟರಿ ಮ್ಯಾನ್ ಜೊತೆ ಕೈ ಹಿಡಿದು ಮುಂಬೈನ ಸಲೂನ್ ಬಳಿ ಕಂಗನಾ ಕಾಣಿಸಿಕೊಂಡಿದ್ದಾರೆ. ಈ ವೇಳೆ, ಪಾಪರಾಜಿಗಳು ಫೋಟೋ ಕ್ಲಿಕ್ಕಿಸುವಾಗ ನಗುತ್ತಲೇ ಇಬ್ಬರೂ ಪೋಸ್ ನೀಡಿದ್ದಾರೆ. ಇಬ್ಬರ ಒಡನಾಟ ನೋಡಿ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನು ಕಂಗನಾ ಸ್ಪಷ್ಟನೆ ನೀಡಬೇಕಿದೆ.‌ ಇದನ್ನೂ ಓದಿ:ಆಮೀರ್ ಖಾನ್ ಮಗಳ ಆರತಕ್ಷತೆಯಲ್ಲಿ ಬಾಲಿವುಡ್ ಕಲಾವಿದರ ಸಮಾಗಮ

ಇನ್ನೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ಚರಿತ್ರೆ ಆಧರಿಸಿ ‘ಎಮರ್ಜೆನ್ಸಿ’ (Emergency Film) ಸಿನಿಮಾ ಈ ವರ್ಷ ರಿಲೀಸ್ ಆಗಲಿದೆ. ಸಾಲು ಸಾಲು ಸೋಲನ್ನೇ ನೋಡಿರೋ ಕಂಗನಾಗೆ ಈ ಚಿತ್ರ ಸಕ್ಸಸ್ ನೀಡುತ್ತಾ? ಕಾದುನೋಡಬೇಕಿದೆ.

Share This Article