‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

Public TV
3 Min Read

ಮುಂಬೈ: ಬಾಲಿವುಡ್ ಚಿತ್ರರಂಗದ ಬಗ್ಗೆ ಯಾವುದೇ ಭಯವಿಲ್ಲದೆ ನೇರವಾಗಿ ಮಾತನಾಡುವ ಕಂಗನಾ ರಣಾವತ್ ಇಂದು ಆಲಿಯಾ ಭಟ್ ವಿರುದ್ಧ ಸಿಡಿದೆದ್ದಿದ್ದಾರೆ.

ಆಲಿಯಾ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾದ ಸಾಂಗ್ ಇತ್ತೀಚೆಗೆ ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಆದರೆ ಈ ಸಿನಿಮಾದಲ್ಲಿ ಆಲಿಯಾ ಅಭಿನಯದ ವಿರುದ್ಧ ಕಂಗನಾ ಆಕ್ರೋಶ ಹೊರಹಾಕಿದ್ದಾರೆ. ಆಲಿಯಾ ಅವರನ್ನು ‘ಡ್ಯಾಡಿಸ್ ಏಂಜೆಲ್’ ಮತ್ತು ‘ರೋಮ್‍ಕಾಮ್ ಬಿಂಬೋ’ ಎಂದು ಕರೆಯುವ ಮೂಲಕ ಬಾಲಿವುಡ್‍ನಲ್ಲಿ ಸ್ಟಾರ್ ಡಮ್ ಹೇಗೆ ನಿರ್ಧಾರವಾಗುತ್ತೆ ಎಂಬುದನ್ನು ಹೇಳಿ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !

‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾ ರಿಲೀಸ್ ಗೆ ಇನ್ನೂ 5 ದಿನ ಇರಬೇಕಾದರೆ ಬಾಕ್ಸ್ ಆಫೀಸ್‍ನಲ್ಲಿ ಬಾಂಬ್ ಸ್ಫೋಟಿಸಲಿದೆ ಎಂದು ಎಲ್ಲ ಕಡೆ ಸುದ್ದಿ ಹಬ್ಬಿದೆ. ಈ ಸುದ್ದಿ ಕೇಳಿ ರೋಚಿಗೆದ್ದ ಕಂಗನಾ ಇನ್‍ಸ್ಟಾಗ್ರಾಮ್ ನಲ್ಲಿ, ಈ ಶುಕ್ರವಾರ 200 ಕೋಟಿ ರೂ. ಬಾಕ್ಸ್ ಆಫೀಸ್‍ನಲ್ಲಿ ಸುಟ್ಟು ಬೂದಿಯಾಗಲಿದೆ. ಪಾಪಾ(ಸಿನಿಮಾಗಳ ಮಾಫಿಯಾ ಡ್ಯಾಡಿ) ಕಿ ಪರಿ(ಬ್ರಿಟಿಷ್ ಪಾಸ್‍ಪೋರ್ಟ್ ಇಟ್ಟುಕೊಳ್ಳಲು ಇಷ್ಟಪಡುವವಳು) ಏಕೆಂದರೆ ಅಪ್ಪ ತನ್ನ ರೋಮ್‍ಕಾಮ್ ಬಿಂಬೋ ನಟಿಸುತ್ತಾಳೆ ಎಂದು ಸಾಬೀತು ಮಾಡಲು ಬಯಸುತ್ತಾರೆ. ಅದಕ್ಕೆ ಈ ಸಿನಿಮಾದ ದೊಡ್ಡ ನ್ಯೂನತೆಯೆಂದರೆ ಪಾತ್ರಕ್ಕೆ ಸರಿಯಾದ ಕಾಸ್ಟಿಂಗ್ ಮಾಡದಿರುವುದು. ಈ ಜನರು ಎಂದೂ ಬದಲಾಗುವುದಿಲ್ಲ. ದಕ್ಷಿಣ ಮತ್ತು ಹಾಲಿವುಡ್ ಚಿತ್ರರಂಗದಲ್ಲಿಯೂ ಈ ಸಿನಿಮಾ ತೆರೆಕಾಣಿಸಿಕೊಳ್ಳುವುದರಲ್ಲಿ ಯಾವುದೇ ರೀತಿಯ ಆಶ್ಚರ್ಯವಿಲ್ಲ. ಬಾಲಿವುಡ್ ಸಿನಿಮಾ ಮಾಫಿಯಾ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಾಲಿವುಡ್ ಮಾಫಿಯಾ ಡ್ಯಾಡಿ ಪಾಪಾ ಜೋ ಅವರಿಂದ ಪ್ರಭಾವಿತರಾಗಿದ್ದಾರೆ. ಬನ್ಸಾಲಿ ಅವರನ್ನು ಭಾವನಾತ್ಮಕವಾಗಿ ಗುರಿ ಮಾಡಿ ಆಲಿಯಾ ಅವರನ್ನು ಅವರ ಸಿನಿಮಾದಲ್ಲಿ ನಟಿಸುವಂತೆ ಮಾಡಲಾಗಿದೆ. ‘ಮೂವಿ ಮಾಫಿಯಾ’ದ ಪ್ರಭಾವದಿಂದ ದೊಡ್ಡ ಸಿನಿಮಾಗಳ ನಿರ್ಮಾಪಕರು ಸಹ ತಮ್ಮ ಸಿನಿಮಾಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

ಈ ಮೂಲಕ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ವಿರುದ್ಧ ಆಕ್ರೋಶಗೊಂಡ ಅವರು, ಬಾಲಿವುಡ್ ಮಾಫಿಯಾ ಪಾಪಾ ಎಂದು ಕರೆದು, ಇವರ ಮನೋರಂಜನೆಯನ್ನು ನಿಲ್ಲಿಸುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ. ಈ ಶುಕ್ರವಾರ ಬಿಡುಗಡೆಯಾಗುವ ಸಿನಿಮಾದಲ್ಲಿ ದೊಡ್ಡ ನಾಯಕ ಮತ್ತು ಶ್ರೇಷ್ಠ ನಿರ್ದೇಶಕರೂ ಸಹ ಅವನ ಮಾಫಿಯಾಗೆ ಹೊಸ ಬಲಿಪಶುಗಳಾಗಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Gangubai ???????? (@aliaabhatt)

ಸಿನಿಮಾ ಯಾವುದು?
ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥಿವಾಡಿ’ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಶಂತನು ಎಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಹುಸೇನ್ ಜೈದಿ’ ಅವರ ಪುಸ್ತಕದ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನ ಅಧ್ಯಾಯವನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗಿದೆ. ಈ ಚಿತ್ರದಲ್ಲಿ ಆಲಿಯಾ 60 ರ ದಶಕದಲ್ಲಿ ಕಾಮತಿಪುರದ ಪ್ರಬಲ ಮತ್ತು ಪ್ರಸಿದ್ಧ ವ್ಯಕ್ತಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಆಲಿಯಾ ಅವರು ನಟಿಸಿದ್ದ ಕೆಲವು ಪವರ್‍ಫುಲ್ ಸಂಭಾಷಣೆಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಇದನ್ನೂ ಓದಿ: ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

 

View this post on Instagram

 

A post shared by Gangubai ???????? (@aliaabhatt)

ಅಲ್ಲದೆ ಈ ಸಿನಿಮಾದಲ್ಲಿ ಆಲಿಯಾ ಸಂಭಾಷಣೆಯನ್ನು ಅನುಕರಿಸುವ ಪುಟ್ಟ ಬಾಲಕಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವೀಡಿಯೋ ನೋಡಿದ ನೆಟ್ಟಿಗರು, ಮಗುವಿಗೆ ಬಾಯಲ್ಲಿ ಬೀಡಿ ಹಿಡಿದು ವೇಶ್ಯೆಯನ್ನು ಅನುಕರಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಬಾಲಕಿಯ ಪೋಷಕರನ್ನು ಬಂಧಿಸಬೇಕು ಎಂದು ಆಕ್ರೋಶ ಹೊರಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *