ಹಾಟ್ ಫೋಟೋ ಹಾಕಿ ಕೆಣಕಿದ್ದ ಸುಪ್ರಿಯಾಗೆ ಕಂಗನಾ ತಿರುಗೇಟು

Public TV
1 Min Read

ಬಿಜೆಪಿಯು ನಟಿ ಕಂಗನಾ ರಣಾವತ್ (Kangana Ranaut) ಗೆ ಟಿಕೆಟ್ (Lok Sabha) ಘೋಷಣೆ ಮಾಡಿದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ನಟಿಯ ಬಗ್ಗೆ ಪರ ಮತ್ತು ವಿರೋಧದ ಅಲೆಗಳು ಕಾಣಿಸಿಕೊಂಡಿವೆ. ಅದರಲ್ಲೂ ಅಲ್ಲಿನ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಮಾಡಿದ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಮತ್ತು ಅದು ವಿವಾದವನ್ನು ಹುಟ್ಟು ಹಾಕಿತ್ತು.

ಕಂಗನಾ ರಣಾವತ್ ಅವರ ಹಾಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದ ಸುಪ್ರಿಯಾ (Supriya Shrinate), ಅರೆಬರೆ ಬಟ್ಟೆ ಮತ್ತು ನಟನೆಯ ಬಗ್ಗೆ ಪೋಸ್ಟ್ ವೊಂದನ್ನು ಮಾಡಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೆ ಕಂಗನಾ ರಣಾವತ್ ಕೂಡ ತಿರುಗೇಟು ನೀಡಿದ್ದಾರೆ. ಹೆಣ್ಣು ಮಕ್ಕಳಿಗೆ ಕಾಂಗ್ರೆಸ್ ಕೊಡುವ ಗೌರವವಿದು ಎಂದು ಬರೆದುಕೊಂಡಿದ್ದರು. ಪರ ವಿರೋಧದ ಮಾತುಗಳು ಹೆಚ್ಚಿಗೆ ಆಗುತ್ತಿದ್ದಂತೆಯೇ ಸುಪ್ರಿಯಾ ತಮ್ಮ ಪೋಸ್ಟ್ ಡಿಲಿಟ್ ಮಾಡಿದ್ದಾರೆ.

ನನ್ನ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿವೆ. ಯಾರೋ ವಿವಾದ ಸೃಷ್ಟಿಸಲೆಂದೇ ಹಾಗೆ ಮಾಡಿದ್ದಾರೆ. ಅದು ನಾನು ಬರೆದದ್ದು ಅಲ್ಲ. ಹಾಗಾಗಿ ಡಿಲಿಟ್ ಮಾಡಿದ್ದೇವೆ. ಈ ಕುರಿತಂತೆ ದೂರು ಕೂಡ ದಾಖಲಿಸಿದ್ದೇವೆ ಎಂದು ಸುಪ್ರಿಯಾ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ, ವಿವಾದ ಮಾತ್ರ ತಣ್ಣಗಾಗಿಲ್ಲ.

 

ಅಂದಹಾಗೆ ಈ ಬಾರಿ ಬಿಜೆಪಿಯು ಕಂಗನಾ ಅವರಿಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರಕ್ಕೆ ಟಿಕೆಟ್ ನೀಡಿದೆ. ಈಗಾಗಲೇ ಕಂಗನಾ ಮಂಡಿ ಕ್ಷೇತ್ರದ ಅಖಾಡದಲ್ಲೂ ಇದ್ದಾರೆ. ತಮ್ಮ ಕೆಲಸವನ್ನು ಶುರು ಮಾಡಿದ್ದಾರೆ.

Share This Article