ಮೋದಿಯ ಮೆಚ್ಚುಗೆಗೆ ಪಾತ್ರವಾಗಿದ್ದ ಕಾಮೇಗೌಡರ ಸಾಮಾಜಿಕ ಸೇವೆಗೆ ಅಧಿಕಾರಿಗಳು ಅಡ್ಡಿ

Public TV
1 Min Read

ಮಂಡ್ಯ: ಆಧುನಿಕ ಭಗೀರಥನ ಸಾಮಾಜಿಕ ಸೇವೆಗೆ ಅಧಿಕಾರಿಗಳು ಅಡ್ಡಿಯಾದ ಹಿನ್ನೆಲೆ ಬೇಸರಗೊಂಡು ಕಲ್ಮನೆ ಕಾಮೇಗೌಡರು ಅನ್ನನೀರು ಬಿಟ್ಟಿದ್ದಾರೆ.

ಅಂತರ್ಜಲ ಅಭಿವೃದ್ಧಿಗೆ ಕೆರೆ ಕಟ್ಟೆ ನಿರ್ಮಿಸಿ ಲಕ್ಷಾಂತರ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಯೋಗಿ ಆಗಿದ್ದರು. ಕಳೆದ 40-50 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಮರಗಿಡಗಳ ಪೋಷಣೆ ಮಾಡುತ್ತಿದ್ದರು. ಪರಿಸರ ಪ್ರೇಮಿ, ಆಧುನಿಕ ಭಗೀರಥ ಕಾಮೇಗೌಡರ ಕಾರ್ಯವನ್ನು ಪ್ರಧಾನಿ ಮಂತ್ರಿ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ

ಮಾಜಿ ಸಿಎಂ ಯಡಿಯೂರಪ್ಪ ಕಾಮೇಗೌಡರಿಗೆ ಮನೆ, ಮಕ್ಕಳಿಗೆ ಉದ್ಯೋಗ ಹಾಗೂ ತಮ್ಮ ಸೇವೆಗೆ ಆರ್ಥಿಕ ನೆರವು ಭರವಸೆ ನೀಡಿದ್ದರು. ಆದರೆ ಈ ವರೆಗೂ ಅವರಿಗೆ ನೀಡಿರುವ ಯಾವುದೇ ಭರವಸೆಗಳು ಈಡೇರಲಿಲ್ಲ. ಕೆಲ ಮಂದಿ ಗೌಡರ ವಿರುದ್ಧ ಮರಳು ಗಣಿಗಾರಿಕೆ ಆರೋಪ ಹೊರಿಸಿದ್ದು, ಇಳಿ ವಯಸ್ಸಿನಲ್ಲೂ ಅವರಿಗೆ ತನಿಖೆ ಎದುರಿಸಬೇಕಾದ ಸ್ಥಿತಿ ಬಂದಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

ಸಾಮಾಜಿಕ ಸೇವೆ ಮುಂದುವರೆಸಲು ಅಧಿಕಾರಿಗಳಿಂದ ಅಡ್ಡಿಯಾದ ಹಿನ್ನೆಲೆ ಕಾಮೇಗೌಡರು ಅಧಿಕಾರಿಗಳ ವರ್ತನೆಗೆ ಬೇಸತ್ತು ಆಹಾರ ತ್ಯಜಿಸಿದ್ದರು. ಮಳವಳ್ಳಿ ತಾಲೂಕು ಆಡಳಿತ ಮಂಡಳಿಯು ಅನಾರೋಗ್ಯದಿಂದ ಬಳಲುತ್ತಿದ್ದ ಗೌಡರನ್ನ ಆಸ್ಪತ್ರೆಗೆ ದಾಖಲಿಸಿದೆ.

Share This Article
Leave a Comment

Leave a Reply

Your email address will not be published. Required fields are marked *