ಮಂಡ್ಯ: ನೊಗ ಹೊತ್ತು ಹೊಲ ಉಳುಮೆ ಮಾಡಲು ಸಹಾಯ ಮಾಡಿದ್ದ ಮಕ್ಕಳ ಕುಟುಂಬಕ್ಕೆ ನೆರವು ಸಿಕ್ಕಿದೆ. ತಾತನಿಗೆ ನೆರವಾದ ಮಕ್ಕಳ ಕುಟುಂಬಕ್ಕೆ ಜ್ಯೋತಿಷಿ ಕಮಲಾಕರ ಭಟ್ ನೆರವಾಗಿದ್ದು, ಎರಡು ಹೋರಿ ಕರುಗಳನ್ನು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ದನಗಳಿಲ್ಲದೇ ಕಷ್ಟ ಪಡುತ್ತಿದ್ದ ತಾತನಿಗೆ ಮೊಮ್ಮಕ್ಕಳು ನೊಗ ಹೊತ್ತು ಸಹಾಯ ಮಾಡುತ್ತಿದ್ದ ವೀಡಿಯೋ ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸುದ್ದಿ ಮಂಗಳವಾರ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಇದನ್ನೂ ಓದಿ:ಕಾಬೂಲ್ ಏರ್ಪೋರ್ಟ್ ಮೇಲೆ ಡ್ರೋನ್ ದಾಳಿ- ತಪ್ಪು ಒಪ್ಪಿಕೊಂಡ ಅಮೆರಿಕ
ತಾತ ಸಣ್ಣಸ್ವಾಮಿ ಹಾಗೂ ಮೊಮ್ಮಕ್ಕಳು ವರ್ಷಿತಾ, ಅಂಕಿತಾ ಉಳುಮೆ ಮಾಡಲು ಎತ್ತುಗಳು ಬೇಕೆಂದು ಮನವಿಯನ್ನು ಮಾಡಿಕೊಂಡಿದ್ದರು. ಈ ಸುದ್ದಿಯನ್ನು ವೀಕ್ಷಿಸಿದ ಜ್ಯೋತಿಷಿ ಕಮಲಾಕರ್ ಭಟ್, ತಾತ ಸಣ್ಣಸ್ವಾಮಿ ಅವರಿಗೆ ಎರಡು ಹೋರಿ ಕರುಗಳನ್ನು ನೀಡಿದ್ದಾರೆ. ಹೋರಿ ಕರುಗಳನ್ನು ಪಡೆದ ಸಣ್ಣಸ್ವಾಮಿ ಹಾಗೂ ಗ್ರಾಮಸ್ಥರು ಪಬ್ಲಿಕ್ ಟಿವಿ ಹಾಗೂ ಕಮಲಾಕರ್ ಭಟ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಚಾಲನೆ – ಇಂದಿನ ಕಾರ್ಯಕ್ರಮಗಳು ಏನು?