Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್‌

Public TV
2 Min Read

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election 2024) ಮತದಾನ ಆರಂಭವಾಗಿದ್ದು ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮಧ್ಯರಾತ್ರಿ ಮಿಷಿಗನ್‌ ರಾಜ್ಯದಲ್ಲಿ  ತಮ್ಮ ಕೊನೆಯ ಚುನಾವಣಾ ಪ್ರಚಾರ ಮುಗಿಸಿದರು.

ಅಮೆರಿಕ ಕಾಲಮಾನ ಸೋಮವಾರ ಮಧ್ಯರಾತ್ರಿ 2:15 ಟ್ರಂಪ್‌ ಕೊನೆಯ ಬಾರಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ “Kamala, you’re fired. Get the hell out of here.” ಎಂದು  ಗುಡುಗಿದರು.

ತಮ್ಮ ಭಾಷಣದಲ್ಲಿ ಅಮೆರಿಕದ ಆರ್ಥಿಕತೆ ಕುಸಿಯಲು ಕಮಲಾ ಅವರ ಆಡಳಿತವೇ ಕಾರಣ. ಇಂದಿಗೆ ಕಮಲಾ ಅವಧಿ ಅಂತ್ಯಗೊಂಡಿದೆ. ಉತ್ತಮ ಅಮೆರಿಕ ನಿರ್ಮಿಸಲು ನನಗೆ ಮತ ಚಲಾಯಿಸಿ ಎಂದು ಕೇಳಿಕೊಂಡರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris), ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

 

ಈಗಾಗಲೇ ಸುಮಾರು 7.7 ಕೋಟಿ ಜನ ಮತದಾನ (Early Voting) ಮಾಡಿದ್ದಾರೆ. ಅಮೆರಿಕದಲ್ಲಿ ಸುಮಾರು ಎರಡು ವಾರಗಳ ಮೊದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

 

Share This Article