ಅತಂತ್ರ ಸ್ಥಿತಿಯಲ್ಲಿ ಥಗ್ ಲೈಫ್ ಕರ್ನಾಟಕ ವಿತರಕ

Public TV
1 Min Read

ಟ ಕಮಲ್ ಹಾಸನ್ (Kamal Hassan) ಬಾಯಿಮುಚ್ಚಿಕೊಂಡು ಸುಮ್ಮನಿದ್ದರೆ, ಥಗ್ ಲೈಫ್ (Thug Life) ಸೋಲುತ್ತಿತ್ತೋ, ಗೆಲ್ಲುತ್ತಿತ್ತೋ ಬೇರೆ ಮಾತು. ಆದರೆ ಒಬ್ಬ ವಿತರಕನನ್ನು ಅಡ್ಡಕತ್ತರಿಗೆ ಸಿಲುಕಿಸಲಿಕ್ಕೆ ಹೋಗುತ್ತಿರಲಿಲ್ಲ. ತಿಂಗಳ ಮುಂಚೆಯೇ ಕೋಟಿ ಕೋಟಿ ಹಣ ಕೊಟ್ಟು, ಕರ್ನಾಟಕದ (Karnataka) ವಿತರಣಾ ಹಕ್ಕು ಪಡೆದಿರುವ ವೆಂಕಟ್ (Venkat) ಇದೀಗ ಇಕ್ಕಟ್ಟಿಗೆ ಸಿಲುಕಿದ್ದಂತೂ ಸತ್ಯ.

ಥಗ್ ಲೈಫ್ (Thug Life) ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ. ಹಲವು ವರ್ಷಗಳ ನಂತರ ಕಮಲ್ ಮತ್ತು ಮಣಿರತ್ನಂ (Mani Ratnam) ಒಂದಾಗಿ ಕೆಲಸ ಮಾಡಿದ್ದರು. ಹಾಗಾಗಿ ಸಹಜವಾಗಿಯೇ ಕ್ರೇಜ್ ಕ್ರಿಯೇಟ್ ಆಗಿತ್ತು. ಕರ್ನಾಟಕದಲ್ಲಿ ವಿತರಿಸಲು ಮುಂಗಡವಾಗಿ ವಿತರಕರು ಅಂದಾಜು ಆರು ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರಂತೆ. ಚೆನ್ನಾಗಿ ದುಡ್ಡು ಮಾಡಬೇಕು ಅಂತ ಹೋದವರು, ಈಗ ಕೈಕೈ ಹಿಚುಕೊಳ್ಳುತ್ತಿದ್ದಾರೆ.  ಇದನ್ನೂ ಓದಿ: ನಾನು ತಪ್ಪೇ ಮಾಡಿಲ್ಲ, ಅಭಿಮಾನಿಗಳಿಗೆ ಮಾತ್ರ ಕ್ಷಮೆ ಕೇಳ್ತೀನಿ – ನಾಗಶೇಖರ್‌ ವಿರುದ್ಧ ರಚಿತಾ ಕಿಡಿ

ಥಗ್ ಲೈಫ್ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕಮಲ್, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತಾಡಿದ್ದರು. ಪರಿಣಾಮ, ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಆಗಲು ಬಿಡಲಿಲ್ಲ. ಅದು ಕೋರ್ಟ್ ಮೆಟ್ಟಿಲು ಬೇರೆ ಏರಿತು. ಈಗ ಸಿನಿಮಾದ ಫಲಿತಾಂಶ ಜನರಿಗೆ ಗೊತ್ತಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡುವಂತೆ ಸುಪ್ರೀಂ ಆದೇಶಿಸಿದೆ. ಆದರೆ ವಿತರಕರು ಹಿಂದೇಟು ಹಾಕುತ್ತಿದ್ದಾರೆ.

ಈಗ ಸಿನಿಮಾದ ಬಗ್ಗೆ ಜನ ಮಾತಾಡ್ತಾ ಇದ್ದಾರೆ. ಜೊತೆಗೆ ಥಿಯೇಟರ್‌ ಮಾಲೀಕರು ಸಿನಿಮಾ ಪ್ರದರ್ಶಿಸಲು ಒಪ್ಪುತ್ತಿಲ್ಲ. ಹಾಗಾಗಿ ಅಡ್ವಾನ್ಸ್ ಕೊಟ್ಟಿರುವ ಹಣವನ್ನು ವಾಪಸ್ಸು ಕೊಡುವಂತೆ ವಿತರಕರು ಕೇಳುತ್ತಿದ್ದಾರೆ. ಆದರೆ ಈವರೆಗೂ ನಿರ್ಮಾಪಕರಿಂದ ಯಾವುದೇ ಉತ್ತರ ಬಂದಿಲ್ಲವೆಂದು ಹೇಳಲಾಗ್ತಿದೆ.

Share This Article