ಕಮಲಹಾಸನ್ ಪುತ್ರಿ ಒಳಉಡುಪಿನಲ್ಲಿದ್ದ ಫೋಟೋ ಲೀಕ್: ಅಕ್ಷರಾ ಹೇಳಿದ್ದೇನು?

Public TV
1 Min Read

ಮುಂಬೈ: ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ತನ್ನ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದರ ಕುರಿತು ಇದೇ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ನನ್ನ ಖಾಸಗಿ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದವು. ಅವುಗಳನ್ನು ಯಾರು ಲೀಕ್ ಮಾಡಿದ್ದಾರೆಂಬುದು ನನಗೆ ತಿಳಿದಿಲ್ಲ. ಆದರೆ ಒಂದು ಹುಡುಗಿಯನ್ನು ಈ ರೀತಿ ಬಳಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ಕೆಲ ವಿಕೃತ ಮನಸ್ಸುಗಳ ಆಟಕ್ಕೆ ಈ ರೀತಿ ಬಲಿಯಾಗಿರುವುದನ್ನು ನಾನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ #ಮೀಟೂ ಅಭಿಯಾನ ನಡೆಯುತ್ತಿದೆ. ಆದರೆ ಇದರ ನಡುವೆಯೇ ಕಾಮುಕರು ನನ್ನ ಖಾಸಗಿ ಫೋಟೋಗಳನ್ನು ವೈರಲ್ ಮಾಡಿ, ಜನರ ಮುಂದೆ ತಮ್ಮ ನಡತೆಯನ್ನು ತೋರಿಸಿಕೊಂಡಿದ್ದಾರೆ. ಆದರೆ ಇದರಿಂದಾಗಿ ನನಗೆ ಬಹಳ ನೋವಾಗಿದೆ. ಈಗಾಗಲೇ ಇದರ ಬಗ್ಗೆ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಅಕ್ಷರಾ ಹಾಸನ್ ಪ್ರೈವೇಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಕ್ಷರಾ ಹಾಸನ್ ಅವರು ಇಂದು ಹಾಕಿರುವ ಟ್ವೀಟ್ ಗಮನಿಸಿದರೆ, ಈ ಫೋಟೋಗಳು ಅವರದ್ದೇ ಎಂದು ಖಚಿತಪಡಿಸಿದಂತಿದೆ. ಈ ಬಗ್ಗೆ ತನಿಖೆ ಮಾಡುತ್ತಿರುವ ಸೈಬರ್ ಕ್ರೈಂ ಪೊಲೀಸರು ಈ ಫೋಟೋಗಳನ್ನು ಅಪ್‍ಲೋಡ್ ಮಾಡಿದ್ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಅಲ್ಲದೆ ಈ ಫೋಟೋಗಳು ಅಪ್‍ಲೋಡ್ ಮಾಡಿದವರಿಗೆ ಸಿಕ್ಕಿದ್ದು ಹೇಗೆ..? ಅಕ್ಷರಾ ಅವರ ಮೊಬೈಲ್‍ನಿಂದಲೇ ಈ ಫೋಟೋ ತಗೊಂಡ್ರಾ ಅಥವಾ ಬೇರೆ ಯಾವುದಾದರೂ ತಂತ್ರಜ್ಞಾನ ಬಳಸಿ ಈ ಕೃತ್ಯವೆಸಗಿದ್ರಾ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಯಬೇಕಿದೆ.

https://www.instagram.com/p/BppAsI1BOi5/?utm_source=ig_web_copy_link

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *