ಚಿತ್ರ ಬಿಡುಗಡೆಯಾದರಷ್ಟೇ ಪ್ರದರ್ಶನ: ವಿಕ್ಟರಿ ಥಿಯೇಟರ್ ಯೂ ಟರ್ನ್

Public TV
1 Min Read

– ಕಮಲ್ ಹಾಸನ್ ಕ್ಷಮೆ ಕೇಳುವಂತೆ ಚಿತ್ರಮಂದಿರ ಆಗ್ರಹ

ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಕನ್ನಡ ಭಾಷಾ ವಿವಾದದ ನಡುವೆಯೂ ಚಿತ್ರ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದ ವಿಕ್ಟರಿ ಸಿನಿಮಾ ಥಿಯೇಟರ್ (Victory Cinema Theatre) ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಥಿಯೇಟರ್ ಯೂ ಟರ್ನ್ ಹೊಡೆದಿದೆ.

ರಾಜ್ಯದಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ವ್ಯಾಪಕ ವಿರೋಧದ ನಡುವೆ ಚಿತ್ರ ರಿಲೀಸ್ ಮಾಡುವುದಾಗಿ ಮಾಗಡಿ ರೋಡ್ ವಿಕ್ಟರಿ ಥಿಯೇಟರ್ ಘೋಷಿಸಿತ್ತು. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿ, ವಿವಾದ ಬದಿಗಿಟ್ಟು ಸಿನಿಮಾ ವೀಕ್ಷಣೆ ಮಾಡೋಣ ಎಂದು ಕರೆ ನೀಡಿತ್ತು. ಪೋಸ್ಟ್ ಬೆನ್ನಲ್ಲೇ ಥಿಯೇಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಎಕ್ಸ್‌ನಲ್ಲಿ ಪೋಸ್ಟ್ ಮುಖಾಂತರವೇ ಕನ್ನಡ ಪರ ಸಂಘಟನೆಗಳು ಥಿಯೇಟರ್‌ಗೆ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ ಕೇಸ್ – ಓರ್ವ ಅಪ್ರಾಪ್ತ ಸೇರಿ ಇಬ್ಬರ ಬಂಧನ

ಇದೀಗ ಸಂಘಟನೆಗಳ ವಾರ್ನಿಂಗ್ ಬೆನ್ನಲ್ಲೇ ಥಿಯೇಟರ್ ತನ್ನ ವರಸೆ ಬದಲಿಸಿದೆ. ಚಿತ್ರ ಬಿಡುಗಡೆಯಾದರಷ್ಟೇ ಥಿಯೇಟರ್‌ನಲ್ಲಿ ಪ್ರದರ್ಶನ. ಸದ್ಯಕ್ಕೆ ಬಿಡುಗಡೆಯ ವಿವಾದ ಬಗೆಹರಿದಿಲ್ಲ ಎಂದು ಪೋಸ್ಟ್ ಹಾಕಿ ಯೂಟರ್ನ್ ಹೊಡೆದಿದೆ. ಅಲ್ಲದೇ ಕಮಲ್ ಹಾಸನ್ ಕ್ಷಮೆ ಕೇಳುವಂತೆ ಚಿತ್ರಮಂದಿರ ಆಗ್ರಹಿಸಿದೆ. ಇದನ್ನೂ ಓದಿ: ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ

Share This Article