ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

Public TV
2 Min Read

ನಾಯಕನಲ್ಲದೇ ನಿರ್ಮಾಪಕನಾಗಿಯೂ ಕೆಲಸ ಮಾಡ್ತಿರೋ ಕಮಲ್‌ ಹಾಸನ್‌ (Kamal Haasan) ಈಗ ನಟ ರಾಕ್ಷಸ ಸೂರ್ಯ (Surya) ಜೊತೆಗೆ ಬಿಗ್‌ ಬಜೆಟ್‌ ಸಿನಿಮಾವೊಂದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಯೆಸ್‌… ಕಳೆದ ವರ್ಷ ಕಮಲ್‌ ತಮ್ಮ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ʻಅಮರನ್‌ʼ (Amaran) ಚಿತ್ರ ನಿರ್ಮಿಸಿದ್ದರು. ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ನಟನೆಯ ಹಾಗೂ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ಸಕ್ಸಸ್‌ ಕಂಡಿತ್ತು. ಆ ಬಳಿಕ ಇದೇ ಬ್ಯಾನರ್‌ ಅಡಿಯಲ್ಲಿ ಮದ್ರಾಸ್ ಟಾಕೀಸ್ ನಿರ್ಮಿಸಿದ ಥಗ್‌ ಲೈಫ್‌ ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಆದ್ರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಿರೋದ್ರಿಂದ ಈ ಚಿತ್ರದ ಗಳಿಕೆಯೂ ಕುಸಿದಿದೆ. ಈ ಬೆನ್ನಲ್ಲೇ ಕಮಲ್‌ ಪ್ರಸಿದ್ಧ ಸ್ಟಂಟ್‌ ಮಾಸ್ಟರ್‌ ಅನ್ಬರಿವು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

ಸದ್ಯ ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ, ಆದ್ರೆ ಯು. ಅರುಣ್‌ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅರುಣ್‌ ಕುಮಾರ್‌ ಈಗಾಗಲೇ ನಿರ್ದೇಶಿಸಿರುವ ಸಿದ್ಧಾರ್ಥ್‌ ಅಭಿನಯದ ʻಚಿತ್ತʼ, ವಿಕ್ರಮ್‌ ನಟನೆಯ ʻವೀರ ಧೀರ ಸೂರನ್‌ʼ ಚಿತ್ರಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ. ಇದೀಗ ಕಮಲ್‌ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ ನಟ ಸೂರ್ಯ ನಾಯಕನಾಗಿ ನಟಿಸಲಿದ್ದು, ಬಿಗ್‌ ಬಜೆಟ್‌ ಸಿನಿಮಾ ಇದಾಗಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

2022ರಲ್ಲಿ ತೆರೆಕಂಡ ʻವಿಕ್ರಮ್‌ʼ ಸಿನಿಮಾ ಭಾರೀ ಹಿಟ್‌ ಆಗಿದ್ದು, ಇದರ ಭಾಗ-2 ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕಮಲ್‌ ನಾಯಕನಾಗಿ ನಟಿಸಿದ್ದು, ಸೂರ್ಯ ವಿಲನ್‌ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಭಾಗ-2ನಲ್ಲಿ ಸೂರ್ಯ ಅವರ ಪಾತ್ರದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ

Share This Article