ಮುಂಬೈನಲ್ಲಿ ಕಮಲ್ ಹಾಸನ್ ಮತ್ತು ಶಿವಣ್ಣ ಭೇಟಿ

Public TV
2 Min Read

ಸಿನಿಮಾ ರಂಗದ ಇಬ್ಬರು ದಿಗ್ಗಜರು ಮುಖಾಮುಖಿಯಾಗಿದ್ದಾರೆ. ಭೇಟಿಗೆ ಕಾರಣವನ್ನು ಬಹಿರಂಗ ಪಡಿಸದೇ ಇದ್ದರೂ, ಇದೊಂದು ಆಕಸ್ಮಿಕ ಭೇಟಿ ಎಂದೂ ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಇದೀಗ ಹೊಸ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈನಲ್ಲಿ ಸಿನಿಮಾದ ಪ್ರಚಾರ ನಡೆಯುತ್ತಿದೆ. ಈ ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗುತ್ತಿರುವುದರಿಂದ ಶಿವಣ್ಣ ಮುಂಬೈಗೆ (Mumbai) ಪ್ರಸಾಸ ಬೆಳೆಸಿದ್ದರು. ಆ ಸಂದರ್ಭದಲ್ಲಿ ಕಮಲ್ (Kamal Haasan)  ಮತ್ತು ಶಿವಣ್ಣ (Shivaraj Kumar) ಹೊಟೇಲ್ ವೊಂದರಲ್ಲಿ ಭೇಟಿ ಮಾಡಿದ್ದಾರೆ.

ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್ ಶಿವನ (Shiva) ಪಾತ್ರವನ್ನು ನಿರ್ವಹಿಸಲಿದ್ದಾರೆ. ಶಿವನಾಗಿ ಪ್ರಭಾಸ್ (Prabhas) ಹೇಗೆ ಕಾಣುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಹಾಗಾಗಿಯೇ ಅಭಿಮಾನಿಗಳು ತಾವೇ ‘ಎಐ’ ತಂತ್ರಜ್ಞಾನದಲ್ಲಿ ಶಿವನ ಅವತಾರ ಫೋಟೋ ರೆಡಿ ಮಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸದ್ಯ ವೈರಲ್ ಆಗಿವೆ.

ನ್ಯೂಜಿಲೆಂಡ್‌ನಲ್ಲಿ ಶೂಟಿಂಗ್

ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ (Kannappa) ಚಿತ್ರಕ್ಕೆ ನ್ಯೂಜಿಲೆಂಡ್ (New Zealand) ನಲ್ಲಿ ಚಿತ್ರೀಕರಣ (Shooting) ಪ್ರಾರಂಭವಾಗಿದೆ. ಈ ಚಿತ್ರವು ವಿಷ್ಣು ಮಂಚು (Vishnu Manchu) ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದಾರೆ.

 

ಇಂಥದ್ದೊಂದು ಬೃಹತ್‍ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಪ್ರಾರಂಭವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ. ಈ ಪ್ರಯಾಣದಲ್ಲಿ ಕಥೆಗೆ ಸೂಕ್ತ ಸಲಹೆ, ಸೂಚನೆ ಕೊಟ್ಟು ಪ್ರೋತ್ಸಾಹಿಸಿದ ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್‍, ತೋಟಪಲ್ಲಿ ಸಾಯಿನಾಥ್‍, ತೋಟ ಪ್ರಸಾದ್‍ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರನ್ನು ವಿಷ್ಣು ಮರೆಯುವುದಿಲ್ಲ. ಅವರೆಲ್ಲರ ಸಲಹೆ-ಸೂಚನೆಗಳಿಲ್ಲದಿದ್ದರೆ ಚಿತ್ರದ ಕಥೆ ಇಷ್ಟೊಂದು ಅದ್ಭುತವಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎಂದು ನಂಬಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್