‘ಕಲ್ಕಿ’ಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

Public TV
1 Min Read

ಡಾರ್ಲಿಂಗ್‌ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಿಂದ ಹೊಸ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಬಾಲಿವುಡ್ ಹಾಟ್ ಬೆಡಗಿ ದಿಶಾ ಪಟಾನಿ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿ ನಟಿಯ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

‘ಕಲ್ಕಿ’ ಸಿನಿಮಾದಲ್ಲಿ ಘಟಾನುಘಟಿ ಸ್ಟಾರ್‌ಗಳ ದಂಡೇ ಇದೆ. ಹೀಗಿರುವಾಗ ಪ್ರಭಾಸ್ ಜೊತೆ ದಿಶಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಚೆಂದದ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್

ಅಂದಹಾಗೆ, ಇತ್ತೀಚೆಗೆ ಕಲ್ಕಿ ಟ್ರೈಲರ್ ಬಿಡುಗಡೆಯಾಗಿತ್ತು. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುಮ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ (Prabhas) ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.

ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಪ್ರಭಾಸ್ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.

ಇನ್ನೂ ನಾಗ ಅಶ್ವೀನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾ ಬಹುಭಾಷೆಗಳಲ್ಲಿ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷವಾಗಿದೆ.

Share This Article