ಕಲಬುರಗಿ: ಗುರುಪೂರ್ಣಿಮೆ ಹಿನ್ನೆಲೆ ಜಿಲ್ಲೆಯ ಅಫಜಲಪುರದ ಗಾಣಗಾಪುರದಲ್ಲಿರುವ (Ganagapura) ದತ್ತನ ಸನ್ನಿಧಿಯಲ್ಲಿ (Dattatreya Temple) ದೇವರ ದರ್ಶನ ವೇಳೆ ಕಾಲ್ತುಳಿತ ಸಂಭವಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಬಸವಕಲ್ಯಾಣದ ಕಲಾವತಿ (50) ಮೃತ ಮಹಿಳೆ.ಇದನ್ನೂ ಓದಿ: ಮುಡಾ ಹಗರಣ | ಸಿಎಂ ಪತ್ನಿಗೆ ಹೈಕೋರ್ಟ್ ನೋಟಿಸ್
ಗುರುವಾರದ ಗುರುಪೂರ್ಣಿಮೆ ಹಿನ್ನೆಲೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಸಾವಿರಾರು ಜನರು ದತ್ತಾತ್ರೇಯನ ಸನ್ನಿಧಿಗೆ ಆಗಮಿಸಿದ್ದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಬಂದಿದ್ದರು.
ಈ ವೇಳೆ ದರ್ಶನ ಪಡೆಯಲು ಮುಂದಾದಾಗ ಜನದಟ್ಟಣೆ ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು, ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮಂಗಳೂರಿನ ಯುವಕರ ಮೊಳಕೆಕಾಳಿನ ವ್ಯಾಪಾರಕ್ಕೆ ಜನರ ಭಾರಿ ಮೆಚ್ಚುಗೆ