20 ಸಾವಿರ ರೂ. ಕಮಿಷನ್ ಕೊಟ್ರೆ ಮಾತ್ರ ಅಂಗವಿಕಲರಿಗೆ ತ್ರಿಚಕ್ರ ಬೈಕ್!

Public TV
1 Min Read

– 7 ತಿಂಗಳಿಂದ ಮಳೆಯಲ್ಲಿ ನಿಂತು ತುಕ್ಕು ಹಿಡಿಯುತ್ತಿರುವ ತ್ರಿಚಕ್ರ ಬೈಕ್‍ಗಳು

ಕಲಬುರಗಿ: ಜಿಲ್ಲೆಯ (Kalaburagi) ವಿವಿಧ ಭಾಗಗಳ ಅಂಗವಿಕಲರಿಗಾಗಿ 180 ತ್ರಿಚಕ್ರ ಬೈಕ್‍ಗಳು (Tricycle) ಬಂದು 7 ತಿಂಗಳು ಕಳೆದಿವೆ. ಈ ತ್ರಿಚಕ್ರ ಬೈಕ್‍ಗಳನ್ನು ಫಲಾನುಭವಿಗಳಿಗೆ ಇಲಾಖೆ ಇದುವರೆಗೂ ನೀಡಿಲ್ಲ. ಇಲಾಖೆ ಅವರಣದಲ್ಲೇ ಬಿಸಿಲು ಮಳೆಯಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ.

ಕಳೆದ ಬಾರಿ ಸಿಎಂ ಸಿದ್ದರಾಮಯ್ಯನವರು (Siddaramaiah) ಮಂಡಿಸಿದ ಬಜೆಟ್‍ನಲ್ಲಿ ರಾಜ್ಯಾದ್ಯಂತ ಅಂಗವಿಕಲರಿಗೆ 4 ಸಾವಿರ ಬೈಕ್‍ಗಳನ್ನ ನೀಡುವುದಾಗಿ ಘೋಷಣೆ ಮಾಡಿದ್ದರು. ಇದರಿಂದ ಅಂಗವಿಕಲರಿಗೆ ತ್ರಿಚಕ್ರ ಬೈಕ್‍ಗಳನ್ನು ನೀಡುವುದಕ್ಕೆ ಸರ್ಕಾರ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಬೈಕ್‍ಗಳನ್ನು ಸರಬರಾಜು ಮಾಡಿದೆ. ಕಲಬುರಗಿ ಜಿಲ್ಲೆಗೆ 4 ಸಾವಿರ ಅಂಗವಿಕಲ ಬೈಕ್‍ಗಳು ಮಂಜೂರು ಅಗಿವೆ.

ಫಲಾನುಭವಿಗಳು ಅಧಿಕಾರಿಗಳಿಗೆ 10 ರಿಂದ 20 ಸಾವಿರ ರೂ. ಕಮಿಷನ್ ಕೊಟ್ಟರೆ ಮಾತ್ರ ಬೈಕ್ ನೀಡುತ್ತಾರೆ ಎಂದು ಅಂಗವಿಕಲರ ಸಂಘ ಆರೋಪಿಸಿದೆ. ಇನ್ನೂ ಈ ಬಗ್ಗೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಯನ್ನು ಕೇಳಿದರೆ ಫಲಾನುಭವಿಗಳಿಗೆ ಬೈಕ್ ವಿತರಣೆ ಮಾಡುವ ವಿಚಾರದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಹೇಳಿದ್ದಾರೆ.

ನಿಯಮದಂತೆ ಫಲಾನುಭವಿಗಳ ಹೆಸರಲ್ಲಿ ಈಗಾಗಲೇ ಬೈಕ್ ವಿತರಣೆ ಮಾಡಲಾಗಿದೆ. ಇನ್ನುಳಿದ ಬೈಕ್ ಸಹ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article