ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್​ ಸ್ಟೈಫಂಡ್ ಹಗರಣ – 81.21 ಕೋಟಿ ದುರುಪಯೋಗ ಸಾಬೀತು

Public TV
1 Min Read

ಕಲಬುರಗಿ: ಮಹದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡ್ ಹಣದಲ್ಲಿ 81.21 ಕೋಟಿ ರೂ. ದುರುಪಯೋಗವಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ದಾಳಿಯಿಂದ ಬಹಿರಂಗವಾಗಿದೆ.

ಭೀಮಾಶಂಕರ್ ಬಿಲಗುಂದಿ, ಎಸ್.ಎಂ. ಪಾಟೀಲ್ ಮತ್ತು ಸುಭಾಷ್ ಜಗನ್ನಾಥ್ ಅವರ ಮೇಲೆ ಪಿಜಿ ವಿದ್ಯಾರ್ಥಿಗಳ ಹಣ ದುರುಪಯೋಗಪಡಿಸಿಕೊಂಡ ಆರೋಪ ಮಾಡಲಾಗಿತ್ತು. ಖಾಲಿ ಚೆಕ್‌ಗಳಿಗೆ ವಿದ್ಯಾರ್ಥಿಗಳಿಂದ ಸಹಿ ಹಾಕಿಸಿಕೊಂಡು ಹಣ ಕಬಳಿಸಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ಹೆಚ್​ಕೆಇ ಮಾಜಿ ಅಧ್ಯಕ್ಷ ಭೀಮಾಶಂಕರ್ ಬಿಲಗುಂದಿ, ಎಮ್​ಆರ್​ಎಮ್​ಸಿ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಎಸ್ ಎಂ ಪಟೇಲ್, ಲೆಕ್ಕಪರಿಶೋಧಕ ಸುಭಾಷ್ ಚಂದ್ರರ ಕಚೇರಿ ಸೇರಿದಂತೆ ಕಲಬುರಗಿಯಲ್ಲಿ 7 ಕಡೆ ಇಡಿ ದಾಳಿ ನಡೆಸಿತ್ತು. ಇದೀಗ ಇಡಿ ಅಧಿಕಾರಿಗಳ ತನಿಖೆಯಿಂದ ಹಗರಣ ನಡೆದಿರುವು ಸಾಬೀತಾಗಿದೆ. ಇದನ್ನೂ ಓದಿ:MBBS ವಿದ್ಯಾರ್ಥಿಗಳಿಗೆ 80 ಕೋಟಿ ಸ್ಕಾಲರ್‌ಶಿಪ್‌ ವಂಚನೆ ಆರೋಪ – `ಕೈ’ ಮುಖಂಡನ ಮನೆ ಮೇಲೆ ಇಡಿ ದಾಳಿ

ಏನಿದು ಪ್ರಕರಣ?
2018 ರಿಂದ 2024 ರ ವರೆಗೆ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಭೀಮಾಶಂಕರ್ ಬಿಲಗುಂದಿ ವಿರುದ್ಧ ಎಂಆರ್​ಎಂಸಿ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡ್ ಹಗರಣ ಆರೋಪ ಕೇಳಿಬಂದಿತ್ತು. 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸುಮಾರು 80 ಕೋಟಿ ರೂ. ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಮಾಡಲಾಗಿತ್ತು.

ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಆಗುತ್ತಿದ್ದಂತೆ ಚೆಕ್​ಗಳನ್ನು ಬಳಸಿ ಆರೋಪಿಗಳು ರೀಫಂಡ್ ಮಾಡಿಕೊಳುತ್ತಿದ್ದರು. ಅಕ್ರಮದ ಬಗ್ಗೆ ಕಲಬುರಗಿಯ ಸಿಇಎನ್​ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಈ ಎಫ್​ಐಆರ್ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: Belagavi | 2 ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಒಂದೇ ಕುಟುಂಬದ ಮೂವರ ಸಾವು

Share This Article