ಕಲಬುರಗಿ| ಕರದಳ್ಳಿ ರಸ್ತೆ ಮಧ್ಯದಲ್ಲಿರುವ ಸೈಯದ್ ಪೀರ್ ದರ್ಗಾ ಧ್ವಂಸ

Public TV
1 Min Read

ಕಲಬುರಗಿ: ಚಿತ್ತಾಪುರ (Chittapur) ಪಟ್ಟಣದ ಹೊರವಲಯದಲ್ಲಿರುವ ಚಿತ್ತಾಪುರ-ಕರದಳ್ಳಿ ರಸ್ತೆ ಮಧ್ಯದಲ್ಲಿರುವ ಸೈಯದ್ ಪೀರ್ ದರ್ಗಾವನ್ನು ಕೆಲ ಕಿಡಿಗೇಡಿಗಳು ನಿನ್ನೆ ರಾತ್ರಿ (ಗುರುವಾರ) ವೇಳೆ ಧ್ವಂಸಗೊಳಿಸಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

ದರ್ಗಾದ ಗೇಟಿನ ಬೀಗ ಮುರಿದು, ಸುತ್ತ ಕಟ್ಟಿದ ಕಟ್ಟೆ ಮತ್ತು ದರ್ಗಾದ ಮೇಲೆ ಸ್ಥಾಪಿಸಿದ ಗೋಪುರವನ್ನು ಧ್ವಂಸಗೊಳಿದ್ದಾರೆ ಎಂದು ತಿಳಿದು ಬಂದಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಹೊಂದಿರುವ ಸೈಯದ್ ಪೀರ್ ದರ್ಗಾವನ್ನು ಧ್ವಂಸಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆಗೆ ಗ್ರಾಸವಾಗಿ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಇದನ್ನೂ ಓದಿ: Jammu Kashmir | ಕಾಂಗ್ರೆಸ್‌ ಬೆಂಬಲ ಇಲ್ಲದೇ ಬಹುಮತ ಸಾಧಿಸಿದ NC

ಈ ರೀತಿ ದರ್ಗಾವನ್ನೇ ಗುರಿಯಾಗಿಸಿಟ್ಟಿಕೊಂಡು ದರ್ಗಾವನ್ನು ಧ್ವಂಸಗೊಳಿಸಿರುವುದು ಸರಿಯಲ್ಲ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ದರ್ಗಾದ ಉಸ್ತುವಾರಿ ಸೈಯದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಹಗರಣ: ತನಿಖೆಗೆ ಎಸ್‌ಐಟಿ ರಚನೆಗೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್

ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಕ್ರೈಂ ಪಿಎಸ್‌ಐ ಚಂದ್ರಾಮಪ್ಪ, ಸಿಬ್ಬಂದಿ ಬಸ್ಸು ರೆಡ್ಡಿ, ದತ್ತು ಸೇರಿದಂತೆ ದರ್ಗಾದ ಉಸ್ತುವಾರಿ ಸೈಯದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃತ್ಯದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ನಾವು ರಾಜಕೀಯ ಸಭೆ ಮಾಡಿಲ್ಲ, ನಮ್ಮ ಮೇಲಿನ ಆಪಾದನೆಯಿಂದ ಬೇಜಾರಾಗಿದೆ: ಪರಮೇಶ್ವರ್

Share This Article