ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಗೋಲ್ಮಾಲ್ – ವಿರೋಧಿಸಿದ ಅಭ್ಯರ್ಥಿಗಳಿಗೆ ಪುಡಿ ರೌಡಿಗಳಿಂದ ಅವಾಜ್

Public TV
1 Min Read

ಕಲಬುರಗಿ: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‍ಸಿ) ಪರೀಕ್ಷೆಯಲ್ಲಿ ಗೋಲ್‍ಮಾಲ್ ನಡೆದಿದ್ದು, ವಿರೋಧಿಸಿದ ವಿದ್ಯಾರ್ಥಿಗಳಿಗೆ ಪುಡಿ ರೌಡಿಗಳಿಂದ ಆಡಳಿತ ಮಂಡಳಿ ಅವಾಜ್ ಹಾಕಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕಲಬುರಗಿಯ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆಗೆ ಹಾಜರಾದ ಕೆಲ ಅಭ್ಯರ್ಥಿಗಳಿಗೆ ಖಾಲಿ ಓಎಂಆರ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಪರೀಕ್ಷೆ ನಂತರ ಪರಿಣಿತರಿಂದ ಫುಲ್‍ಫಿಲ್ ಮಾಡಲು ಪ್ಲಾನ್ ಮಾಡಲಾಗಿತ್ತು. ಇದನ್ನು ಕಂಡ ಇತರೆ ಅಭ್ಯರ್ಥಿಗಳು ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೋಲ್‍ಮಾಲ್ ದೃಶ್ಯ ಸೆರೆ ಹಿಡಿಯುತ್ತಿದ್ದ ಅಭ್ಯರ್ಥಿಗಳಿಗೆ ಅವಾಜ್ ಹಾಕಿದ್ದಾರೆ. ಈ ರೌಡಿಗಳಿಗೆ ಆಡಳಿತ ಮಂಡಳಿ ಸದಸ್ಯರುಗಳೇ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈಗಾಗಲೇ ಬ್ಲ್ಯಾಕ್ ಲಿಸ್ಟ್‍ನಲ್ಲಿರುವ ಪ್ರವೀಣ್ ವಿದ್ಯಾಸಂಸ್ಥೆಯಂತಹ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ನೀಡಿದ ಕೆಪಿಸಿಸಿ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *